#ಚಿತ್ರಕಾವ್ಯ_ಅಭಿಯಾನ_೧೫ #ನೋಯದಿರು_ಮಗಳೇ ನೋಯದಿರು ಮಗಳೇ ಹೀಗೆ ಇದೆ ನಿನಗೆ ಈ ಅಮ್ಮನ ಹೆಗಲು ಯಾರಿಲ್ಲವೆಂದು ಕೊರಗದಿರು ಅತ್ತು ನೀ ನನ್ನ ಪ್ರಾಣಕ್ಕಿಂತ ಮಿಗಿಲು ಈ ಪುರುಷ ಸಮಾಜದಲ್ಲಿ ಏಕೋ ಸ್ತ್ರೀಯ ಸ್ಥಾನಮಾನ ತೃಣಕ್ಕಿಂತ ಕಡೆ ಅರಿಯರವರು ಮೂಢ ಜನರು ಹೆಣ್ಣವಳು, ಛಾಪಿತ್ತಳು ಎಲ್ಲ ಕಡೆ ಮುದುಡದಿರು ಮನನೊಂದು ಮಗು ಹೆಣ್ಣೆಂದು ಜರಿವವರೆಲ್ಲರೂ ಮೂಢರು ಹೆಣ್ಣಿನಿಂದಲೇ ಬಾಳ ಬೆಳಕು ಅವಳೇ ಆ ದೈವ ಸ್ವರೂಪಿಣಿ ಎಂದರಿಯರು ತೊತ್ತಿನಾಳಲ್ಲ, ತುತ್ತಿತ್ತು ಸಲಹುವಳು ಎಂದೇಕರಿಯರೊ ಅವರು ನಾ ಕಾಣೆ ಗಂಡಿನ ಸರಿಸಮಕೆ ದುಡಿದರೂ ಏಕೋ.. ಗಂಡೆ0ಬ ಹಮ್ಮಿಗೇ ಮಣೆ ಕಷ್ಟ ಸಹಿಷ್ಣುತೆ, ಸುಖ ದುಃಖ ನೋವುನಲಿವುಗಳಿಗಿದೆ ಒಂದು ಮಿತಿ ಗಂಡಿನಾಶ್ರಯವಿಲ್ಲದೆ ಸಾಗಿಸಬಹುದು ಬದುಕು ಆ ದೇವ ಮೆಚ್ಚುವ ರೀತಿ ಎದ್ದೇಳು.. ತೋರಿಸು ಬಾ ಮಗಳೇ ಹೆಣ್ಣೆಂಬ ಶಕ್ತಿಯ ವಿರಾಟ್ ರೂಪವ ಅಚ್ಚರಿಗೊಳ್ಳಲೀ ಜಗ, ಮೆಚ್ಚಿ ಹೆಣ್ಕುಲವ ತೊಡೆದು ಕೊಳ್ಳಲೀ ತಾ ಮಾಡಿದ ಪಾಪವ ಡಾ: B.N. ಶೈಲಜಾ ರಮೇಶ್