263 ಶಿಶುಗೀತೆ... ಕೂಸುಮರಿ


#ಶಿಶು_ಗೀತೆ

#ಶೀರ್ಷಿಕೆ  #ಕೂಸುಮರಿ_ಪಾಪುಮರಿ

ತಾತಾ, ತಾತಾ ಬನ್ನಿ ಆಡೋಣ
ಕುದುರೆ ಸವಾರಿ ಮಾಡೋಣ
ಕುದುರೆಯಂತೆ ಬಾಗಿರಿ ಬೇಗ
ಸವಾರನಂತೆ ಹತ್ತುವೆ ನಾನೀಗ

ಅಯ್ಯೋ ಕಂದ ನನಗೆ ವಯಸ್ಸಾಯ್ತು
ಸೊಂಟ ಬೆನ್ನು ನೋಡು ಬಗ್ಗೋಯ್ತು
ನಿನ್ನ ಸರಿ ಸಮ ಆಡಲಾರೆನು ನಾ
ಬಿಟ್ಟುಬಿಡೋ ಮಗು ಈ ಮುದುಕನ್ನ

ಊಂ ಊಂ ಊಂ ಆಗದು ತಾತ
ನೀವ್ ಕೇಳಲೇ ಬೇಕು ನನ್ನಯ ಮಾತ
ಒಬ್ಬಂಟಿ ನಾನೀಗ ಈ ಮನೆಯಲ್ಲಿ
ಆಡುವರಾರಿಹರು ನನ್ನ ಜೊತೆಯಲ್ಲಿ

ಅಪ್ಪ ಅಮ್ಮಆಫೀಸಿಗೋದರೆ
ಮನೆಯಲ್ಲಿ  ನಾವು ಮೂವರೇ
ಆಟಕೆ ಯಾರೂ ಗೆಳೆಯರು ಇಲ್ಲ
ನೀವಿಬ್ಬರೇ ತಾನೇ ನನಗೆಲ್ಲಾ

ಅಜ್ಜಿ ಸೇರಿಬಿಟ್ಟರೆ ಅಡುಗೆಮನೆ
ಉಳಿದವರು ನೀವ್ ಒಬ್ಬರೇ ತಾನೇ
ನನಗೂ ತಿಂದೂ ಮಲಗಿ ಸಾಕಾಯ್ತು
ಆಟ ಆಡುವ ಆಸೆ ಆತಿಯಾಯ್ತು

ಅಪ್ಪನಿದ್ಧಿದ್ದರೆ ನನ್ನಯ ಜೊತೆಗೆ
ಬರುತ್ತಿರಲಿಲ್ಲ ನಾನು ನಿಮ್ಮವರೆಗೆ
ಅಮ್ಮನಿಗಂತೂ ಬಿಡುವೇ ಇಲ್ಲ
ಪ್ರೀತಿಯ ಕಾಣದೆ ಬಡವಾದೆನಲ್ಲ😢

ಅಯ್ಯೋ ಕಂದ ನನ್ನ ಮುದ್ದುಮರಿ 
ಅಳದಿರು ಆಡೋಣ ಕೂಸುಮರಿ
ಇಲ್ಲವೇನೋ ಕಂದ ನಾ ಮುದ್ದಿಸಲು
ನಿನ್ನಿಷ್ಟದಂತೆಲ್ಲ ಆಟ ಆಡಿಸಲು

ಬಾರೋ ಕಂದ ಹತ್ತು ಬೆನ್ನೇರಿ
ಮಾಡಿಸುವೆ ಬಾ ಆನೆ ಸವಾರಿ
ಆನೇ ಬಂತೊಂದಾನೆ, ಯಾವೂರಾನೆ
ನನ್ನ ಚಿನ್ನ ಆಡುವ ಮುದಿಯಾನೆ...

    ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ