292 ಅಪರಂಜಿಯಾಗು_ಮನವೇ

#ಚಿತ್ರಕಾವ್ಯ_ಅಭಿಯಾನ_೧೩

#ಶೀರ್ಷಿಕೆ #ಅಪರಂಜಿಯಾಗು_ಮನವೇ

ಅಂತರಂಗದಲೆದ್ದ ಅಲೆ
ಬೀಸಿದೆ ಅನುರಾಗದ ಬಲೆ
ಸೋಕಿಸಿ ಮೈಯ್ಯ ಕಾವ
ಸುಟ್ಟುಬಿಟ್ಟೆಯೆಲ್ಲ ಕಾಯವ

ಚೆಂದ ಚೆಲುವಲಿ ಮಾತು
ಆಡಿದೆಯಲ್ಲ ಬಳಿ ಕುಳಿತು
ಮಾತಿನಲ್ಲೇ ವಿಷ ಉಣಿಸಿ
ದಹಿಸಿಬಿಟ್ಟೆಯೆಲ್ಲ ಮನವ

ದಿಕ್ಕು ದೆಸೆ ಇಲ್ಲದ ಮನ
ಕಳೆದುಕೊಂಡಿತ್ತು ತನ್ನತನ
ಮೋಹದಮಲಲ್ಲಿ ತೋಯಿಸಿ
ಕೊಂದು ಬಿಟ್ಟೆಯೆಲ್ಲ ತನುವ

ಯೌವನವೆಂಬ ಮಾಯೆ
ಆವರಿಸಿದ್ದೆಲ್ಲವೂ ಛಾಯೆ
ಕುರುಡು ಪ್ರೇಮದ.ಬೆಂಕಿ
ದಹಿಸಿ ಬಿಟ್ಟಿತ್ತೆಲ್ಲ ಸೋಕಿ

ಬದುಕು ಬಣ್ಣದ ಬೆರಗು
ಅತಿಯಾಸೆ ಸಾವಿನ ಸೆರಗು
ಭ್ರಮರದಂತಾವರಿಸಿ ನೀನು
ಹೀರಿಬಿಟ್ಟೆಯಲ್ಲ ಸವಿಜೇನು

ಅರಳಿ ನಗುತಲಿದ್ದ ಹೂವು
ಸೋಕಿತು ಕಾಮದ ಕಾವು
ಹಚ್ಚಿಬಿಟ್ಟನೇ ಉರಿ ಬೆಂಕಿ
ಧಗ ಧಗಿಸಿ ಉರಿಸುತ್ತಾ

ಬೆಂಕಿಯದು ಉರಿದಾಡೇ
ಬಂಗಾರ ತಾ ಕರಗದೇ?
ಪುಟಕ್ಕಿಟ್ಟ ಚಿನ್ನದಂತೆ ನೀ
ಅಪರಂಜಿಯಾಗು ಮನವೇ

    ಡಾ: ಶೈಲಜಾ ರಮೇಶ್

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ