ನೀ ನನ್ನ ಬಾಳ ಚಂದಿರ
ನೀ ನನ್ನ ಬಾಳ ಚಂದಿರ ******************* ಅದೆಂಥ ಪುಳಕ ಕಂದ ನಿನ್ನಪ್ಪುಗೆಯ ಸುಖ ಆ ದೇವನಿತ್ತ ವರವಿದು ನೀನನ್ನ ಬಾಳ ಕನಕ ನಿನ್ನ ಸ್ಪರ್ಶ ವಿತ್ತಿದೆ ಹರ್ಷ ಅದೇನಂಥಾ ಒನಪು ಆ ಜೊಲ್ಲ ಸವಿಜೇನಧಾರೆ ಬದುಕಿಗಿತ್ತಿದೆ ಹುರುಪು ಮುಗ್ಧ ಮುಖದಲ್ಲಿ ಎಂಥಾ ಸೆಳೆದೆಳೆವ ಚೆಲುವು ಆ ಕಣ್ಣಕಾಂತಿಯಲ್ಲೇ ಬೆಳಗುತ್ತಿದೆ ಜೀವನವು ನಿನ್ನ ತೊದಲ್ನುಡಿಯ ಬಾಲಭಾಷೆ ಕೇಳಲೆಷ್ಟು ಚೆಂದ *ಅಮ್ಮಾ* ಎಂಬ ಆ ಕರೆಗೆ ನಾ ಬೆರಗಾದೆ ಕಂದ ಮುದ್ದುಮಗುವೆ ನಿನ್ನ ನಗುವೆ ಎನ್ನ ಬಾಳಿಗಾಸರೆ ಕರುಳಕುಡಿಯೇ ನಿನ್ನ ನುಡಿಗೆ ಆದೇ ನಾನು ಕೈಸೆರೆ ನೀಬಂದ ಕ್ಷಣದಿಂದ ಈ ಬದುಕು ಎಷ್ಟು ಸುಂದರ ಮುದ್ದುಬಾಲ ಕಂದ ನೀನೇ ನನ್ನ ಬಾಳ ಚಂದಿರ ಶೈಲೂ......