Posts

Showing posts with the label 314 ಲಜ್ಜೆಯೇ ಮನದ ಭಾಷೆ

314 ಲಜ್ಜೆಯೇ ಮನದ ಭಾಷೆ

Image
#ಗಝಲ್ #ವಿಷಯ #ಲಜ್ಜೆಯೇ_ಮನದ_ಭಾಷೆ ಆ ನಿನ್ನ ಹುಸಿನಗುವೇ ಎನ್ನ ಸೆಳೆದಿದೆ ಗೆಳೆಯ ಹೃದಯ ಭಾಷೆಯ ಬಿಚ್ಚಿಟ್ಟು ತಿಳಿಸಿದೆ ಗೆಳೆಯಾ ಒಲವ ನೋಟದೊಳೆನ್ನ ಇಂಚಿಂಚಾಗಿ ಹೊಕ್ಕೆ ಪ್ರೇಮದ ಹೊಳೆಯ ಹೊನಲಾಗಿ ಹರಿಸಿದೆ ಗೆಳೆಯಾ ಬಿತ್ತಿದೆ ಹೊಸ ಆಸೆಯ ಬದುಕು ಹಸನಾಗಿಸಲು ಭರವಸೆಯಿತ್ತು ಬಾಳಿಗೆ ಬೆಳಕು ಹಾಯಿಸಿದೆ ಗೆಳೆಯಾ ಸೋತೆ ನವಿರಾದ ಪ್ರೀತಿಯ ವಚನವನು ಮನ್ನಿಸಿ ಮನವ ಮೆಚ್ಚಿದೆನೆಂದು ಅರುಹಿದೆ ಗೆಳೆಯಾ ಲಜ್ಜೆಯೇ ನನ್ನ ಮನಸ್ಸಿನ ಮಾತು ಅರ್ಥವಾಯಿತೆ? ಶೈಲ ನಿನಗೊಲಿದಳೆಂದು ನಸುನಾಚಿದೆ ಗೆಳೆಯಾ ಡಾ: B.N. ಶೈಲಜಾ ರಮೇಶ್