Posts

Showing posts with the label 245....ಕಥೆ.. ಸ್ವಪ್ನ

245....ಕಥೆ.. ಸ್ವಪ್ನ

Image
ನೀಳ್ಗತೆ ******* ಸ್ವಪ್ನ ****        ಮೊನ್ನೆ ಊರ ಜಾತ್ರೆಗೆ ಹೋಗಿದ್ದಾಗ ಅವಳನ್ನು ಕಂಡೆ... ಅವಳ ನಿಸ್ತೇಜ ಮುಖ ಗುಳಿಬಿದ್ದ ಕಣ್ಣುಗಳು, ಬಳುಕುವ ಬಳ್ಳಿಯಂತಿದ್ದ ಅವಳು ಗಾಳಿ ಬೀಸಿದರೆ ಹಾರಿ ಹೋಗುತ್ತಾಳೆನೋ ಅನ್ನುವಷ್ಟು ಸವೆದಿದ್ದ ಅವಳನ್ನು ನೋಡಿದ ತಕ್ಷಣವೇ ಕರುಳು ಕಿವುಚಿ ಬಂತು... ಅರಿವಿಲ್ಲದೆಯೇ ಕಣ್ಣೀರ ಕೊಡಿ ಹರಿಯಿತು.  ಎಷ್ಟು ಲವಲವಿಕೆಯಿಂದಿದ್ದ ಅಕ್ಕನ ಮಗಳು ಸ್ವಪ್ನ ಇಂದು ಜೀವಚ್ಛವದಂತೆ ಕಂಡಾಗ ದುಃಖ ಉಮ್ಮಳಿಸಿ ಬರದೇ ಇರಲಿಲ್ಲ. ಹಾಗೆಯೇ ಮನಸು ನೆನಪಿನಾಳಕ್ಕೆ ಜಾರಿತು.         ಸ್ವಪ್ನ ಹುಟ್ಟಿದಂದಿನಿಂದಲೂ ಮನೆಯಲ್ಲಿ ಎಲ್ಲರೂ ಇವಳೇ ನಿನ್ನ.ಹೆಂಡತಿ ಎನ್ನುತ್ತಿದ್ದಾಗ, ಆ ಮುದ್ದುಗೊಂಬೆಯನ್ನು ನೋಡಿ ಸಂತಸ ಉಕ್ಕುತ್ತಿತ್ತು, ಅಕ್ಕನಿಗೂ ನನಗೂ 13 ವರ್ಷಗಳ ಅಂತರ, 20 ಕ್ಕೆ ಅಕ್ಕನ ಮದುವೇಯಾಗಿ 21ಕ್ಕೆ ಸ್ವಪ್ನ ಹುಟ್ಟಿದಾಗ ತೊಟ್ಟಿಲಿಗೇ ತಾಳಿ ಕಟ್ಟುವಂತೆ.. ನನ್ನ ಸ್ವಪ್ನಳ ಮದುವೆಯ ಮಾತುಕಥೆಯಾಗಿದ್ದಿತು.  ಮದುವೆಯ ಅರ್ಥ ಗೊತ್ತಿಲ್ಲದ ವಯಸ್ಸಾದರೂ ಮುದ ನೀಡುತ್ತಿದ್ದ ಆ ಹೆಸರು ಸ್ವಪ್ನ ಬೆಳೆದಂತೆಲ್ಲಾ  ಕಚಗುಳಿಯಿಟ್ಟಂತೆ.ಬಾಸವಾಗುತ್ತಿತ್ತು... ದಿನೇ ದಿನೇ ಚಂದ್ರಮನಂತೆ ಹೊಳೆಯುತ್ತಿದ್ದ ನನ್ನ ಸ್ವಪ್ನ ಅಪ್ಸರೆಯನ್ನೂ ಮೀರಿಸುತ್ತಿದ್ದಳು          ಇಬ್ಬರೂ ಹದಿಹರೆಯಕ್ಕೆ ಕಾಲಿಟ್ಟಾಗ, ಒಬ್ಬರನೊಬ್ಬರು ನೋಡಿ...