Posts

Showing posts with the label 140 ಸಂಕ್ರಾಂತಿ

140 ಸಂಕ್ರಾಂತಿ

Image
ಸಂಕ್ರಾಂತಿ ********** ರಜತದ್ಹರಿವಾಣದಲಿ  ಕುಸರಿಕಲೆ ಕಸೂತಿ ವಸ್ತ್ರ ಬೆಳ್ಳಿ ಬಟ್ಟಲಲಿದೋ  ಎಳ್ಳು ಬೆಲ್ಲದ ಮಿಶ್ರ ಕಡಲೆ ಕೊಬ್ಬರಿ ಮಿಳಿತ  ಹದವಾದ ಪಾತ್ರ ಜೊತೆಗಿಹುದು ಸಿಹಿಯ  ಮೃದು ಸಕ್ಕರೆ ಅಚ್ಚು ಅದರೊಡನೆ ಕಲೆತು  ಎಲಚಿಯ ಗುಚ್ಚು ಕದಳಿಫಲದ ಜೊತೆ  ರಸಭರಿತ ಕಬ್ಭು ಹರಿಷಿನ ಕುಂಕುಮ ಹೂ  ತಾಂಬೂಲದ ಸೊಬಗು ಎಳ್ಳು ಬೀರುತ  ಸಂಬಂಧಗಳಿಗೆ ಬೆಸುಗೆ ಗಟ್ಟಿಗೊಳಿಸುವ  ಬಾಂಧವ್ಯಗಳ ಒಸಗೆ ಎಳ್ಳುಬೆಲ್ಲ ಸವಿದು  ಒಳ್ಳೊಳ್ಳೆ ಮಾತಾಡಿ ಸಂಕ್ರಾಂತಿಯಿಂದ  ಶುಭಕ್ರಾಂತಿಗೆ ಮುನ್ನುಡಿ...          ಡಾ:  ಶೈಲಜಾ ರಮೇಶ್