295 ಶಿಶುಗೀತೆ

#ಚಿತ್ರ_ಕಾವ್ಯ_ಅಭಿಯಾನ

#ಶಿಶುಗೀತೆ

ಅಮ್ಮ ಬಾರೇ ನೋಡು
ಚಂದದ ಕಾಡು ಮೇಡು
ಬಿಡಿಸಿರುವೆ ನಾನು ಪುಸ್ತಕದಲಿ
ಚಿತ್ರದ ಜೊತೆಗೆ ಪಾಠ
ಓದುತ್ತಾ ಆಡಿ  ಆಟ
ವಿಷಯವ ಗ್ರಹಿಸಿದೆ ಮಸ್ತಕದಲಿ

ಬಂದೇ ಇರು ಕಂದಾ
ತೋರೆ ಬರಹದ ಅಂದ
ಬಿಡಿಸಿದೆ ಏನದು ಚಿತ್ರದಲೀ
ಪಾಟದೊಂದಿಗೆ ಕಲೆ
ಕಲಿತರೆ ಬಾಳಿಗೆ ಬೆಲೆ
ಎಲ್ಲವೂ ಇರಲಿ ಚಿತ್ತ ಭಿತ್ತಿಯಲಿ

ಮಾಡದೆ ರಜೆಯ ವ್ಯರ್ಥ
ತಿಳಿದೆನು ಓದಿನ ಅರ್ಥ
ವಿದ್ಯೆಯೇ ಮನುಜಗೆ ಭೂಷಣವು
ಬಾಲ್ಯದಲೆರಡು ಅಕ್ಕರದ
ವಿದ್ಯೆಯನ್ನು ಕಲಿಯದ
ಮನುಜ ನೀತಿಯನರಿಯದ ಪಶುವು

ಅಬ್ಬಾ ಎಂಥಾ ಜಾಣೆ
ಓದಿನಲ್ಲಿ ಪ್ರವೀಣೆ
ಮಗಳೇ ನೀನೇ ಹೆಮ್ಮೆಯ ಮುಕುಟ
ಮಗನಿಲ್ಲದ ಚಿಂತೆ
ನೀಗಿದ ನೀನೇ ಪ್ರಣತೆ
ಗಂಡಿಗಿಂತಲೂ ಹೆಣ್ಣೇ ಮಾತೆಗೆ ನಿಕಟ

ಯೋಚಿಸಬೇಡವೆ ಅಮ್ಮ
ಅಳುತ್ತಾ ನೋಯದಿರಮ್ಮ
ಗಂಡು ಮಗನಂತೆಯೇ ನಾ ಸಾಕುವೆನು
ಚಂದದಿ ವಿದ್ಯೆಯ ಕಲಿತು
ಎಲ್ಲರೊಡನೆಯೂ ಬೆರೆತು
ತರುವೆನು ತಾಯ್ನಾಡಿಗೆ ಕೀರ್ತಿಯನು

   ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ