Posts

Showing posts with the label 203.ಹೂವಾಡಗಿತ್ತಿ

203.ಹೂವಾಡಗಿತ್ತಿ

Image
ಹೂವಾಡಗಿತ್ತಿ ************* ಹೂ ಮಾರಿಯಾದರೂ ಹೊಟ್ಟೆ ಹೊರೆಯುತ್ತೇನೆ ಬೇಡಿ ತಿನ್ನುವವಳಲ್ಲ ! ಹೊಟ್ಟೆ ತುಂಬುವುದಕ್ಕೆ ಯಾವ ಕೆಲಸವಾದರೇನು ಅವಮಾನ ವೆಂಬುದಿಲ್ಲ ! ಹಬ್ಬ ಬಂತಾದರೆ ನಮಗ0ದೇ  ಹಬ್ಬ ದುಡಿಮೆ  ಮರೆಯುವುದಿಲ್ಲ ! ಹಗಲಿರುಳಾದರೇನೂ ಮಳೆಬಿಸಿಲಾದರೇನೂ ಕಾಯಕವ ಮರೆತು ನಡೆದಿಲ್ಲ  ! ಹಾದಿ ಬದಿಯಲ್ಲಿ ಕುಳಿತು ಬೀದಿಯೆಲ್ಲವ  ಸುತ್ತಿ ಕಟ್ಟುತಿಹೆನು ನನ್ನಯಾ ಬದುಕ ! ಹೀಗಳೆದು, ಕಾಲೆಳೆದು ಕಟುನುಡಿಯನಾಡದಿರಿ ಇರಲೆಮ್ಮ  ಮೇಲೆ  ಮರುಕ ! ಹೂ, ಬೆಳೆವವರ  ಹರಿವವರ ಮಾರುವವರ  ಪಾಡು ಆ ದೇವ ನೊಬ್ಬ ತಾ ಬಲ್ಲ  ! ಹೆಸರಿಗಿಷ್ಟು,  ಕೊಸರಿಗಿಷ್ಟು ಕೇಳುವಿರಿ ಎಷ್ಟೆಂದರಷ್ಟಕ್ಕೆ ನಿಮಗೆ  ಕರುಣೆಯೇ ಇಲ್ಲವಲ್ಲ !             ಶೈಲೂ ........ ಚಿತ್ರ ಕೃಪೆ :--  ಸ್ಮಿತಾ ಬಲ್ಲಾಳ್