Popular posts from this blog
338 ಹುಸಿನಗೆಯ ಬೀರಿ
ಕಣ್ರೆಪ್ಪೆ ಹಾಕದಲೇ ಹುಸಿ ನಗೆಯ ಬೀರಿ ಕುಡಿನೋಟದಿಂದೆನ್ನ ನೋಡದಿರು ಕೃಷ್ಣಾ ನಾಚಿ ನೀರಾಗಿದ್ದೇನೆ ನಾನು ಬೇಡಬೇಡ ವೆಂದರೂ ಎನ್ನಂತರಂಗದ ಭಾವನೆಗಳು ಉಕ್ಕುಕ್ಕಿ ಬರುತ್ತಿವೆ ಹೇಳಲಾರೆ ನಾ ಮನದ ಮಾತುಗಳ... ಅಂತರಾತ್ಮ ನೀನು ಎನ್ನಂತರಂಗವನರಿತಿದ್ದರೂ ಈ ಪರಿ ಕಾಡುವೆಯೇಕೆ ನಿನ್ನೀ ನೋಟದಾ ಸೆಳೆತ ಮರೆಸುತ್ತಿದೆ ಎಲ್ಲ ಮಾಯಾವಿ ನೀನು ಜಗತ್ತನ್ನೆಲ್ಲನಿನ್ನಲ್ಲಡಗಿಸಿಕೊಂಡು ಸೃಷ್ಟಿಸಿದ್ದೀಯ ಏಕಾಂತ ಬೆರೆಸಲಾರೆ ನೋಟಕ್ಕೆ ನೋಟ ಕರಗಿ ಹೋಗಿದ್ದೇನೆ ಲೀನವಾಗಿದ್ದೇನೆ ನಿನ್ನಲ್ಲೇ ನಾನು........ ಶೈಲೂ...........
Comments
Post a Comment