212 ತಂಗಾಳಿಯ ತಂಪಲ್ಲಿ ಬೆಳದಿಂಗಳ ಹಾದಿಯಲಿ
ತಂಗಾಳಿಯ ತಂಪಲ್ಲಿ ಬೆಳದಿಂಗಳ ಹಾದಿಯಲಿ ************************************** ತಂಗಾಳಿಯ ತಂಪಿನ ಈ ಬೆಳದಿಂಗಳ ಹಾದಿಯಲಿ ನಿನ್ನೊಡನೆ ಇಡುವ ಹೆಜ್ಜೆ ಸಗ್ಗದ ಸಿರಿಗೆ ಸಮ ಗೆಳೆಯ ಅನುದಿನವೂ ನೀ ಇರಲು ಜೊತೆಜೊತೆಯಲಿ ಬಾಳೆಲ್ಲ ವಸಂತ ಚೈತ್ರದ ಸಂಭ್ರಮ ಬಲ್ಲೆಯಾ ನೀ ಗೆಳೆಯಾ ಬೆಳದಿಂಗಳಿನೀ ಇರುಳು ನಿನ್ನ ಮೋಹಕ ನಗುವು ಪಿಸುನುಡಿಯ ಆ ಮಾತು ಪುಳಕಗೊಳಿಸಿದೆ ಗೆಳೆಯ ಚಂದಿರನ ಮೊಗದ ಚೆಲುವ ತಂದೆ ನೀ ಬಾಳಿಗೆ ಗೆಲುವ ಜೊತೆಯಿರುವೆ ಎಂದೆಂದೂ ನಾ ನಿನ್ನ ನೆರಳಾಗಿ ಗೆಳೆಯಾ ಬಾಳಪಯಣದ ಜೊತೆಗಾರ ಒಲವಿನಾಗಸದ ಚಂದಿರ ಬದುಕ ಬಯಲಿಗೆ ಬೀರು ಬಾ ತಂಪು ಬೆಳದಿಂಗಳ ಗೆಳೆಯಾ ತಂಗಾಳಿಯ ತಂಪಿನ ಈ ಬೆಳದಿಂಗಳ ಹಾದಿಯಲಿ ನಿನ್ನೊಡನಾಟವೇ ಮಧುರ ನವಿರುಭಾವ ಮೂಡಿದೆ ಗೆಳೆಯ .. ಶೈಲೂ......