349 ಹಚ್ಚೋಣ ಬನ್ನಿ ಕರುನಾಡ ದೀಪ
ಎಲ್ಲರಿಗೂ ನಮಸ್ಕಾರಗಳು🙏🙏 ಸಮಸ್ತ ಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💐💐 #ಚಿತ್ರ_ಕಾವ್ಯ_ಸ್ಪರ್ಧೆ #ಹಚ್ಚ_ಬನ್ನಿ_ಕರುನಾಡ_ದೀಪವ ಹಚ್ಚೋಣ ಬನ್ನಿ ಕರುನಾಡ ದೀಪ ತೊಡೆಯಲೆಲ್ಲ ದ್ವೇಷಾಸೂಯೆಯ ಪಾಪ ಬೆಳಗಲಿ ಎಲ್ಲೆಲ್ಲೂ ಕನ್ನಡಮ್ಮನ ಕೀರ್ತಿ.! ಹರಡಲವಳ ಹೆಸರು ಈ ದೇಶದ ಭರ್ತಿ..!! ಹಚ್ಚಿ ಪ್ರಣತಿ ಕಸ್ತೂರಿ ತೈಲವನೆರೆದು ದೈದೀಪ್ಯಮಾನದಲುರಿಯಲಿ ಮೆರೆದು ಬೆಳಗಲಿ ಜ್ಞಾನ; ಅಜ್ಞಾನ ತಮ ಕಳೆದು..! ತೊಲಗಲೆಲ್ಲರ ಪಾಪಗಳು ಉರಿದುರಿದು ಉರಿದು..!! ಕನ್ನಡ ನಾಡಿದು ದೇವಮಂದಿರದಂತೆ ಪೊರೆವ ತಾಯಿ ಭುವನೇಶ್ವರಿಯಂತೆ ಕಾವಳೆಮ್ಮನು ತನ್ನ ಮಡಿಲ ತೆಕ್ಕೆಯಲಿರಿಸಿ..! ಧೀಮಂತ ಸಂಸ್ಕೃತಿಯ ಜ್ಞಾನದಮೃತವ ಕುಡಿಸಿ..!! ಎನಿತು ಸುಂದರ ಈ ಕರುನಾಡ ಮಂದಿರವು ಜೀವಂತ ನೆಲೆ ಆ ನಿತ್ಯ ಹರಿದ್ವರ್ಣವೂ ಜೀವಸೆಲೆಗಿಹುದು ಜೀವನದಿ ಕಾವೇರಿ..! ಹೊಳೆಯುತಿದೆ ಶಿಲ್ಪಕಲೆ ವೈಭವದ ಸಿರಿ..!! ಡಾ: B.N. ಶೈಲಜಾ ರಮೇಶ್