Posts

Showing posts with the label 132. ಕೃಷ್ಣವರ್ಣ

132. ಕೃಷ್ಣವರ್ಣ

Image
ಕೃಷ್ಣ ವರ್ಣ ********** ನಾನೇನು  ಬೇಡಿ ಬಂದಿದ್ದೆನೆ ಬೇಕೆಂದು ಈ  ಕೃಷ್ಣವರ್ಣ ವರ್ಣವಿರಬಹುದು ಕಪ್ಪು ಆದರೆ ಮನಸ್ಸು  ಹೊಳಪಿನ ಚಿನ್ನ ಕಪ್ಪಾದರೇನಂತೆ ನಾನು ಕರಿಬಂಡೆಯಂತಲ್ಲ ಮನದಲಿ ರಂಗುರಂಗಿನ  ಬಣ್ಣ, ಮಳೆಬಿಲ್ಲಿನಂತೆಲ್ಲ ತೊಗಲು ಕಪ್ಪಾದ ಮಾತ್ರಕ್ಕೆ ಭಾವನೆಗಳೇ ಇಲ್ಲವೆಂದಲ್ಲ ಮನತುಂಬಿ ಬರೆದ ಪದಗಳು ಸುಂದರ ಕವನವಾಯ್ತಲ್ಲ ಜರಿಯ ಬೇಡಿರಿ ಜನರೇ ಕಪ್ಪು ಕಸ್ತೂರಿ  ಹೌದಲ್ಲ..!! ಮೈಬಣ್ಣವಷ್ಟೇ ನೋಡದಿರಿ ಮನಸೋ  ಸಿಹಿ ಸಿಹಿ ಬೆಲ್ಲ ಕೃಷ್ಣನಿಗೆ  ಅತಿಪ್ರಿಯಳು ನಾನಂತೆ ಅದಕೆ ಕೊಟ್ಟನವ ತನ್ನದೇ ಬಣ್ಣ ನಿಂದನೆಗೆ ಬರವಿಲ್ಲವೀ ಜಗದಿ ಬೆಳಕಿನಿಂದಿನ ಕತ್ತಲ ಕಾಣಲಾರರಲ್ಲ..            ಶೈಲೂ......