Posts

Showing posts with the label 171 ಕಾಗುಣಿತ ಕವನ ಕ ಕಾರದಲ್ಲಿ ಕೃಷ್ಣ

171 ಕಾಗುಣಿತ ಕವನ ಕ ಕಾರದಲ್ಲಿ ಕೃಷ್ಣ

Image
#ಕಾಗುಣಿತ_ಕವನ #ಕ_ಕಾರದಲ್ಲಿ_ನನ್ನ_ಕೃಷ್ಣ #ಕ   ಕರೆದರೂ ಕೇಳಿಸದವನಂತೆ ಕುಳಿತು #ಕಾ ಕಾಡಿಸುವುದೇ ಅವನ ಲೀಲೆ #ಕಿ   ಕಿರು ನಗೆಯ ಬೀರಿ ಸಮ್ಮೋಹಿಸಿ #ಕೀ  ಕೀಲು ಗೊಂಬೆಯ ತೆರದಿ #ಕು  ಕುಣಿಸುವನವ ಜಗನ್ನಾಟಕ  ಸೂತ್ರಧಾರ #ಕೂ ಕೂಗಿ ಕರೆದು ಮನವಿತ್ತವರಿಗೆ ಒಲಿವನಂತೆ #ಕೃ   ಕೃಪಾಳು ಅವನಂತೆ ನನ್ನ ಕೃಷ್ಣ ಮಾಧವ #ಕೆ   ಕೆನೆ ಮೊಸರಿತ್ತವರಿಗೆ ಭಕ್ತಿಯಲಿ #ಕೇ ಕೇಳದೆ ಕೊಡುವನಂತೆ ಸೌಭಾಗ್ಯ #ಕೈ  ಕೈವಲ್ಯ ಧಾಮದಲಿ ಸಾಯುಜ್ಯ #ಕೊ ಕೊಡುಗೈ ದಾನಿಯವ #ಕೋ ಕೋರದೆಯೂ ನೀಡುವನು ಸಕಲವ #ಕೌ  ಕೌಶಲ್ಯವಿತ್ತು ಸಕಲ ಕಾರ್ಯ ಸಾಧನೆಗೆ #ಕಂ ಕಂಬನಿ ಬರದಂತೆ ಕಾಯುವ            ಅವನೇ ನನ್ನ ಪ್ರಿಯಬಂಧು ಮಾಧವ             ಶೈಲೂ......