284. ಕಳಚಿಬಿದ್ದಿತೇ_ಮುಖವಾಡ

#ಚಿತ್ರಕಾವ್ಯ_ಅಭಿಯಾನ_೨೬

#ಶೀರ್ಷಿಕೆ

#ಕಳಚಿಬಿದ್ದಿತೇ_ಮುಖವಾಡ

ಕಳಚಿಬಿದ್ದಿತೇ ತೊಟ್ಟ ಮುಖವಾಡ
ಈ ಜಗದ ಸಂತೆ ಬಯಲಿನಲಿ
ಅದೆಷ್ಟು ಅಹಂಕಾರದ ತೆವಲಿತ್ತು
ದೇಹದ ಈ ಕಂತೆ ಬೊಂತೆಯಲಿ

ಸಜ್ಜನಿಕೆಯ ಸೋಗು ಎಷ್ಟು ದಿನವಿದ್ದೀತು?
ಅಪ್ರಮಾಣಿಕತೆ ಹೊರಬರಲೇಬೇಕು
ನೈಜತೆಯ ಮುಚ್ಚಿಟ್ಟು ಬದುಕಲಾದೀತೆ?
ಒಂದು ದಿನ ಬಣ್ಣ ಬಯಲಾಗಬೇಕು

ಮರುಳು ಮಾಡುತ್ತೆಲ್ಲರನು
ಸತ್ಯ ಮುಚ್ಚಿಡಲಾದೀತೆ ಹೇಳು
ಕೊನೆಗೆ ಎಲ್ಲವೂ ಬಯಲಾಯ್ತು
ತಿಳಿ ಮೂರು ದಿನವೀ ಬಾಳು

ವಿಧವಿಧದ ವೇಷವ ಧರಿಸಲಾದೀತೆ?
ಜಗದೊಡೆಯ ಮೇಲಿಹನು ನೋಡುತ
ವಿಧಿ ಬರಹವನ್ನು ಬದಲಿಸಲಾದೀತೇ?
ಸೃಜಿಸಿದವನ ಆಜ್ಞೆಯನು ಮೀರುತಾ

ಇನ್ನಾದರೂ ತಿಳಿ ಮನುಜ ನೀತಿ ನಿಯಮ
ಭುವಿಗೆ ಬಂದದ್ದು ಆ ದೇವನ ಅರಿಯಲು
ಸತ್ಯಮಾರ್ಗದಲಿ ನಡೆವುದೇ ಸದ್ಧರ್ಮ
ಆಗಲೇ ಸೇರಲಾದೀತು ಅವನ ಮಡಿಲು

ಮುಖವಾಡ ತರವಲ್ಲ ಜೀವ ಶಾಶ್ವತವಲ್ಲ 
ನೀರ ಮೇಲಿನ ಗುಳ್ಳೆಯಂತೆ ಬದುಕು
ಅವನ ಕರೆ ಬಂದೊಡನೆಯೇ ಪಯಣ
ಇದ್ದಷ್ಟು ದಿನ ನಮ್ಮ ನಡೆ ಜಗಮೆಚ್ಚಬೇಕು

     ಡಾ: B.N.ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ