Posts

Showing posts with the label 180 ಶ್ರೀ ರಾಮ ಕಥನ

180 ಶ್ರೀ ರಾಮ ಕಥನ

Image
ಶ್ರೀ ರಾಮ ಕಥನ ************** ಇದು ಶ್ರೀರಾಮನ ಪುಣ್ಯ ಕಥನ ನೆನೆದರೆ ಜೀವನ ಪಾವನ ಪುರುಷೋತ್ತಮನ ಆದರ್ಶ ಚರಿತೆಯ ನೆನೆಯಲು ಬಾಳದು ಧನ್ಯ|| ಹುಟ್ಟಿನಿಂದಲೇ ರಾವಣ ತಾನು ಸೊಕ್ಕಿ ಮೆರೆದು ಜಗವನು ಕಾಡಲು ತಕ್ಕ ಶಿಕ್ಷೆ ಯ ಮಾಡಲೊಸುಗ ರಘುಪತಿ ತಾನವತರಿಸಿದನಮ್ಮ .|| ಮಕ್ಕಳಿಲ್ಲದ ದಶರಥ ತಾನು ಪುತ್ರಕಾಮೇಷ್ಠಿ ಯಾಗವ ಮಾಡಲು ಮೆಚ್ಚಿ ಆವಿರ್ಭವಿಸಿದ ಅಗ್ನಿ ದೇವ  ಪಾಯಸವ  ತಾ ನಿತ್ತನಮ್ಮ || ಯಜ್ಞಪುರುಷನ ತೃಪ್ತಿಯ ಹರಕೆಗೆ ಚಂದಿರನಂಥ ಅಂದದ ಮೊಗದ ಮುದ್ದಿನ ಮಕ್ಕಳು ನಾಲ್ವರು ದಶರಥನ ಸತಿಯರಿಗೆ ಜನಿಸಿದರಮ್ಮ.|| ರಾಘವ ಉತ್ತಮನಾಗಿ ಬೆಳೆದು ಹೋಗಿ ಮುನಿಗಳ ಯಾಗವ ರಕ್ಷಿಸಿ ಹರಿಸಿ ತಾ ಅಹಲ್ಯೆಯ ಶಾಪವಾ ದುಷ್ಟ ರಕ್ಕಸರ ಮಣಿಸಿದನಮ್ಮ. || ಜನಕರಾಜನ ಕುವರಿ ಸೀತೆಯ ಸ್ವಯಂವರದೆ ಜಯಿಸಲೋಸುಗ ಶಿವಧನುವನು ಮುರಿದು ಸೀತೆಯ ಗೆದ್ದು ಸಕಲರ  ಸಮ್ಮುಖದಿ ವರಿಸಿದನಮ್ಮ|| ಪಟ್ಟಾಭಿಷೇಕದ ಸಂಭ್ರಮದಲಿರಲು ದುಷ್ಟಕೂಟದ ಕುತಂತ್ರಕೆ ಮಣಿದು ಪಿತೃವಾಕ್ಯವನು ಪಾಲಿಸಲೆಂದು ಸತಿ,ಸೋದರನೊಂದಿಗೆ ವನವಾಸಕೆ ತೆರಳಿದನಮ್ಮ || ಶಿಷ್ಟ ರಕ್ಷಣೆಯ ಭಾರವನೊತ್ತು ದುಷ್ಟ ರಕ್ಕಸರ ಹೆಡೆಮುರಿ ಕಟ್ಟಿ ಕ್ಷಾತ್ರತೇಜಸ್ಸಿನಿಂದೊಳೆಯುವ ಧೀರ ಋಷಿಮುನಿಗಳ ಸೇವೆಯ ಮಾಡಿದನಮ್ಮ || ಮಾಯಾ ಜಿಂಕೆಯ ಮೋಹಕೆ ಬಿದ್ದ ಮೆಚ್ಚಿನ ಮಡದಿಯ  ಆಸೆಯ ನುಡಿಗೆ ಮರೀಚಿಕೆ ಮಾಯೆಯ ಬೆನ್ನಟ್ಟಿ ದುಷ್ಟ ಮಾರೀಚನ ಸಂಹರಿಸಿದನಮ್ಮ || ಮುನಿವೇಷದಿ ಬಂದ ರಾವಣ ತಾನು ಭಿಕ್ಷೆ ಯ ಬೇಡ...