Posts

Showing posts with the label 84. .ಕಾಡದಿರು ನೆನೆಪೇ

84. ಕಾಡದಿರು ನೆನೆಪೇ

Image
ಕಾಡದಿರು  ನೆನೆಪೇ ಕಾಡದಿರು ನೆನೆಪೇ ನೀ  ಭಾವನೆಗಳ ಮೀಟಿ ಕಾಡದಿರು ನೀ.. ಓ ಮಧುರ ನೆನಪೇ ಮೌನಗಳ  ದಾಟಿ || ಸುಂದರ ಸ್ನೇಹದ ಮದುರ ಗಾನ ಜಗವನೆ ಮರೆಸಿದ  ರಮ್ಯ ವಚನ ಮೂಡಿತು ಎನ್ನಲಿ ಸುಮಧುರ ಕವನ ಹೇಗೆ ಮರೆಯಲಿ ಹೇಳು ನಿನ್ನಂದದ  ವದನ  || ನೀನೆಲ್ಲಿದ್ದರೇನು ನಿನ್ನಲೇ ಮನಸು ನೀನುಲಿವಾ ನುಡಿ ತಂದಿತ್ತು ಕನಸು ಪ್ರೀತಿಯಿರುವೆಡೆಯೇ ಇರುವುದು ಮುನಿಸು ಅರಿಯಲೇಕೋ ಸಖ ನೀ ನನ್ನ ಮನಸು  || ಸಾಗರಕೆ ಬೆರೆತ ನದಿಯ ತೆರದಿ ಮನವು ನಿನ್ನಲೇ ಬೆರೆತು ದಾಟಿತು ಪರಿಧಿ ನಾನು ಬೇರೆಂಬ ಭಾವ ಮರೆಸಿ ಸೇರಿತು ನಿನ್ನಲೇ ಸ್ನೇಹವ ಬೆರೆಸಿ ||             ಶೈಲೂ......