277 ರೂಪದ_ಗತ್ತು

#ಚಿತ್ರಕಾವ್ಯ_ಅಭಿಯಾನ_೩೩

#ರೂಪದ_ಗತ್ತು

ಚಂಚಲ ಚಿತ್ತ
ಅಡ್ಡಾಡಿ ಅತ್ತಿತ್ತ
ಮತ್ತಲ್ಲಿಗೇ ಬಂತು
ಅಹಮಿನ ಸುತ್ತ..!!

ಕಲ್ಪನೆಯ ಮೊತ್ತ
ಗಿರಕಿ ಹೊಡೆಯುತ್ತ
ಚೆಲುವ ಚಂದ್ರಿಕೆ
ತಾನೆಂದೆನುತ್ತಾ..!!

ನಾ ಸುರದ್ರೂಪಿ
ಉಳಿದವರೆಲ್ಲ ಪಾಪಿ
ಸೌಂದರ್ಯದೇವತೆ
ಅತಿ ಶೀಘ್ರ ಕೋಪಿ..!!

ದರ್ಪಣದ ತುಂಬ
ತನ್ನದೇ ಬಿಂಬ
ಅಣಕಿಸಿದಂತಾಯ್ತು
ಆ ಪ್ರತಿಬಿಂಬ..!!

ಚಂದ್ರ ಮೊಗದ ಬಾಲೆ
ನೋಡ ನೋಡುತ್ತಲೇ
ಕರಗಿತ್ತವಳ ರೂಪ
ಏನಿದರ ಲೀಲೆ..!!

ಸುಕ್ಕುಗಟ್ಟಿತು ಮುಖ
ಕಪ್ಪಿಟ್ಟಿತು ರೂಪ
ಬೆತ್ತಲಾಯಿತು ಎಲ್ಲ
ಇಳಿದಿತ್ತು ಪ್ರಾಯ..!!

 ರೂಪಮದದ ಗತ್ತೆಲ್ಲ
ನಿನ್ನ ಸ್ವತ್ತೇನಲ್ಲ
ಕಾಲ ಮಾಗಿದ ಮೇಲೆ
ಜಾರಿ ಹೋಗುವುದೆಲ್ಲ..!!

    ಡಾ:B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ