Posts

Showing posts with the label 83. ಮುನಿಸೆಕೆ ಮಾಧವ

83. ಮುನಿಸೆಕೆ ಮಾಧವ

Image
ಮುನಿ ಸೇಕೆ  ಮಾಧವ ****************** ಮುನಿಸೇ ಕೆ ಮಾಧವಾ ಮನ್ನಿಸು ಎನ್ನ ಮರೆಯಲಾರೆನಾ ಮಧುರ ಸ್ನೇಹವನ್ನ ಮಾಧುರ್ಯ ಭರಿತ ಮೃದು ನುಡಿಯನ್ನ ಮರೆಯಲಿ ನಾ ಹೇಗೇಳು ಮೌನವಾಗಿರಬೇಡ ಮುನಿಸುತೋರಲು ಬೇಡ ಮನದ ಮಂದಾರವದು ಮುದುಡಿಹೋಗುವುದು ಮನಸು  ನಿಲ್ಲದು ಮಧುರ ನುಡಿ  ಆಲಿಸದೆ ಮಂಕಾಗುವುದೆನ್ನ ಮನ, ನಿನ್ನ  ನಗುವು  ಕಾಣದೆ ಮಂದಹಾಸವ  ಬೀರು ಮನದ ಮಲ್ಲಿಗೆಯು ಮುತ್ತಾಗಿ  ಹೊಳೆಯುವುದು ಮತ್ತೆ  ಹೊತ್ತು ಗೊತ್ತಿಲ್ಲದೆ ಮುಕ್ತವಾಗಿ  ಅರಳುವುದು ಮುಗುಳ್ನಗೆಯ  ಬೀರಿ......    ಶೈಲೂ......