303 ತೆರೆಯುತ ಬದುಕಿಗೆ ಹೊಸ ಅಧ್ಯಾಯವ

ಸಾಲಿಗೊಂದು ಕವನ##
ಶೀರ್ಷಿಕೆ:--
ತೆರೆಯುತ ಬದುಕಿಗೆ ಹೊಸ ಅಧ್ಯಾಯವ
*********************************
ಸಾಗುತಿದೆ ಜೀವನ ದಿಕ್ಕು ತಪ್ಪಿದ ಹಾದಿಯಲ್ಲಿ
ಮನವ ಆವರಿಸಿರುವ ಕತ್ತಲೆಯ ಬಯಲಿನಲಿ
ಮನದಾಗಸದಲಿ ಕಿಕ್ಕಿರಿದಿರುವ ಕಾರ್ಮುಗಿಲು
ಕಾತರಿಸುತ್ತಿದೆ ಕಣ್ಣ ನೀರ ಹನಿ ಬಿಕ್ಕಿ ಬಿಕ್ಕಿ ಅಳಲು

ನಡೆದ ಹಾದಿಯ ಹಿಂತಿರುಗಿ ಒಮ್ಮೆ ನೋಡಿದೆ ಹೊರಳಿ
ಜೊತೆ ಜೊತೆಗೆ ಸಾಗಿ ಬರುತ್ತಿದೆ ನೋವುಗಳು ಮರಳಿ
ಅರಿಯಲಾರದೆ ಹೋದೆ ಸೋಲಿನ ವ್ಯಥೆಗೆ ಕಾರಣ
ಅಸ್ತವ್ಯಸ್ತ ಬದುಕಲಿ ತುಂಬಿದೆ ಅಹಮಿನ ಹೂರಣ

ಇನ್ನೆಷ್ಟು ದಿನ ಈ ಹೊಯ್ದಾಟದ ಬದುಕು?
ಭಾವಬಂಧನದಲಿ ಸಿಲುಕಿದ್ದ ಜೀವಕೆ ಬೇಕು ಬೆಳಕು
ಜಿಡ್ಡುಗಟ್ಟಿದ ಹಳೆಬೇರಲಿ ಚಿಗುರೀತೆ ಹೊಸಕನಸು?
ಹೊಸಬದುಕಿನ ಹೊಸದಾರಿಗೆ ತೆರೆಯಬೇಕು ಮನಸು

ಗೊಂದಲಗಳ ದೊಂಬಿಯಲಿ ಬಿದ್ದು ಒದ್ದಾಡಿದ್ದು ಸಾಕು
ಇನ್ನಾದರೂ ಅರಿತು ಬೆರೆಯುವುದ ಕಲಿಯಬೇಕು
ತೆರೆಯುತ ನನ್ನೀ ಬದುಕಿಗೆ ಹೊಸ ಅಧ್ಯಾಯವನು
ಬರೆಯುವೆ ಹೊಸ ಭಾಷ್ಯದ ಚಿಂತನೆಗೆ ಮುನ್ನುಡಿಯನು

               ಶೈಲೂ.........

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು