293 ಕಸದಿಂದ_ರಸ

#ಚಿತ್ರಕಾವ್ಯ_ಅಭಿಯಾನ_೧೨

#ಕಸದಿಂದ_ರಸ

ಎಲ್ಲಾ ಕೆಲಸ ಮುಗಿಯಿತೆ ಅಮ್ಮಾ
ಬಾ ಇಬ್ಬರೂ ಆಟ ಆಡೋಣ
ಎಲ್ಲಿ ಮುಗಿಯುತ್ತೆ ಕೆಲಸ ಮಗಳೇ
ಬಾ ಹರಿದ ಬಟ್ಟೆ ರಿಪೇರಿ ಮಾಡೋಣ

ಬೇರೆ ಚಂದದ ಬಟ್ಟೆ ಇದೆಯಲ್ಲ
ಯಾಕೆ ಹರಿದದ್ದು ಹೊಲೆಯುತ್ತಿ?
ಹರಿದದ್ದನ್ನೂ ಬಿಸುಟುವುದೇಕೆ?
ಹಾಕುವೆ ಇದರಲ್ಲೇ ಕಸೂತಿ

ಕಸೂತಿ ಎಂದರೆ ಏನಮ್ಮ.?
ನನಗೂ ಕೂಡ ಕಲಿಸಿಕೊಡು
ಕಸೂತಿ ಅಂದರೆ ಕಲೆಯಮ್ಮ
ಕಸದಲ್ಲೇ ರಸ ತೆಗೆಯೋದು.!

ಹರಿದ ಈ ಬಣ್ಣದ ಸೀರೆಯಲಿ
ಅಮ್ಮ ಏನೇನು ಮಾಡಬಹುದು?
ಹರಿದಿದೆ ಅಷ್ಟೇ ಬಣ್ಣ ಹೊಸತಿದೆ
ತಲೆದಿಂಬಿನ  ಚೀಲ ಹೊಲಿಬಹುದು

ಬೇರೆ ಬಟ್ಟೆಯ ತುಣುಕು ಸೇರಿಸಿ
ಬಣ್ಣಬಣ್ಣದ ದಾರದಿ ಪೋಣಿಸಿ
ನನ್ನ ಮುದ್ದು ಕಂದಗೆ ಫ್ರಾಕು
ಚಂದದ ಲಂಗವ ಹೊಲಿಬಹುದು

ಹೌದೇ ಅಮ್ಮಾ.. ಜಾಣೆ ನನ್ನಮ್ಮ
ಎಲ್ಲವನೂ ಮರು ಉಪಯೋಗಿಸುವೆ
ನಿನ್ನಂತೆಯೇ ನಾನೆಲ್ಲವ ಕಲಿತು
ನಿನಗಿಂತಲೂ ಜಾಣೆ ಎಂದೆನಿಸುವೆ

     ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ