294 ರೈತನ_ಸಂಭ್ರಮ

#ಚಿತ್ರಕಾವ್ಯ_ಅಭಿಯಾನ

#ರೈತನ_ಸಂಭ್ರಮ

ಮಳೆಯು ಸುರಿದು ಕೆರೆಯು ತುಂಬಿ 
ಜೀವ ಸೆಲೆಯು ನಲಿಯಿತು
ಕಾವ ದೈವ ಕೃಪೆಯು ತೋರಿ
ಹಸಿರ ಸಿರಿಯ  ತಣಿಸಿತು

ಹದದಿ ನೆನೆದ ಹೊಲವ ನೋಡಿ
ರೈತ ಹರುಷಗೊಂಡನು
ಜೋಡೆತ್ತು ಸಹಿತ ನೇಗಿಲ್ಹೊತ್ತು
ಹೊಲದ ಕಡೆಗೆ ನಡೆದನು

ಬುತ್ತಿ ಹೊತ್ತ ಮಡದಿ ತಾನು
ರೈತನೊಂದಿಗೆ ಹೊರಟಳು
ಮಳೆಯು ತಂದ ಹರುಷದಿಂದ
ಮಕ್ಕಳೂ ಅವರ ಜೊತೆಯಾದರು

ಉತ್ತು ಬಿತ್ತು ಬೆಳೆಯ ಬೆಳೆದು
ರೈತನ ಬದುಕುಬವಣೆ ನೀಗಿತು
ಸಾಲ ಶೂಲ ಎಲ್ಲಾ ಹರಿದು
ಬದುಕು ಹಸನಾಯಿತು

ರೈತಮಿತ್ರ ವರುಣ ದೇವ
ಕಾಲಕಾಲಕ್ಕೆ ವೃಷ್ಟಿ ಹರಿಸು
ನಾಡಿಗೆಲ್ಲ ಅನ್ನವಿಕ್ಕುವ
ಒಕ್ಕಲುಮಕ್ಕಳನ್ನು ಪೋಷಿಸು

ಸುಗ್ಗಿ ಸಂಭ್ರಮ ತುಂಬಲೆಲ್ಲೆಡೆ
ಹಸಿರು ಕ್ರಾಂತಿ ಮೊಳಗಲಿ
ಶ್ರಮಿಕ ರೈತನ ಶ್ರಮಕೆ ಉತ್ತಮ
ಫಲಕೆ ಬೆಲೆಯು ದೊರೆಯಲಿ

     ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ