290 ನೋಯದಿರು_ಮಗಳೇ

#ಚಿತ್ರಕಾವ್ಯ_ಅಭಿಯಾನ_೧೫

#ನೋಯದಿರು_ಮಗಳೇ

ನೋಯದಿರು ಮಗಳೇ ಹೀಗೆ
ಇದೆ ನಿನಗೆ ಈ ಅಮ್ಮನ ಹೆಗಲು
ಯಾರಿಲ್ಲವೆಂದು ಕೊರಗದಿರು ಅತ್ತು
ನೀ ನನ್ನ ಪ್ರಾಣಕ್ಕಿಂತ ಮಿಗಿಲು

ಈ ಪುರುಷ ಸಮಾಜದಲ್ಲಿ ಏಕೋ
ಸ್ತ್ರೀಯ ಸ್ಥಾನಮಾನ ತೃಣಕ್ಕಿಂತ ಕಡೆ
ಅರಿಯರವರು ಮೂಢ ಜನರು
ಹೆಣ್ಣವಳು, ಛಾಪಿತ್ತಳು ಎಲ್ಲ ಕಡೆ

ಮುದುಡದಿರು ಮನನೊಂದು ಮಗು
ಹೆಣ್ಣೆಂದು ಜರಿವವರೆಲ್ಲರೂ ಮೂಢರು
ಹೆಣ್ಣಿನಿಂದಲೇ ಬಾಳ ಬೆಳಕು ಅವಳೇ
ಆ ದೈವ ಸ್ವರೂಪಿಣಿ ಎಂದರಿಯರು

ತೊತ್ತಿನಾಳಲ್ಲ, ತುತ್ತಿತ್ತು ಸಲಹುವಳು
ಎಂದೇಕರಿಯರೊ ಅವರು ನಾ ಕಾಣೆ
ಗಂಡಿನ ಸರಿಸಮಕೆ ದುಡಿದರೂ
ಏಕೋ.. ಗಂಡೆ0ಬ ಹಮ್ಮಿಗೇ ಮಣೆ

ಕಷ್ಟ ಸಹಿಷ್ಣುತೆ, ಸುಖ ದುಃಖ
ನೋವುನಲಿವುಗಳಿಗಿದೆ ಒಂದು ಮಿತಿ
ಗಂಡಿನಾಶ್ರಯವಿಲ್ಲದೆ ಸಾಗಿಸಬಹುದು
ಬದುಕು ಆ ದೇವ ಮೆಚ್ಚುವ ರೀತಿ

ಎದ್ದೇಳು.. ತೋರಿಸು ಬಾ ಮಗಳೇ
ಹೆಣ್ಣೆಂಬ ಶಕ್ತಿಯ ವಿರಾಟ್ ರೂಪವ
ಅಚ್ಚರಿಗೊಳ್ಳಲೀ ಜಗ, ಮೆಚ್ಚಿ ಹೆಣ್ಕುಲವ
ತೊಡೆದು ಕೊಳ್ಳಲೀ ತಾ ಮಾಡಿದ ಪಾಪವ

ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ