307ಅರಿವಿರದ ಹಾದಿಯಲಿ

ಇಂದಿನ ಥೀಮ್## ಸಾಲಿಗೊಂದು ಕವನ##

ಅರಿವಿರದ ಹಾದಿಯಲಿ
*******************

ಅರಿವಿರದ ಹಾದಿಯಲಿ 
ಅರಿವೇ ಇಲ್ಲದೆ ನಡೆದೇ
ತನ್ನಿರಿವಿನ ಅರಿವಿಲ್ಲ...
ದಾರಿ ಸಾಗುತಿದೆ ಮೆಲ್ಲ...

ಎಲ್ಲಿಗ್ಹೊರಟಿಹೆನೋ ಕಾಣೆ
ಗುರಿಯಿಲ್ಲ... ಗುರುತಿಲ್ಲ
ಮನವೂ ಮುದುಡಿ ಮಲಗಿದೆ
ಯೋಚಿಸಲು ಅರಿವಿಲ್ಲ...

ಭ್ರಾಂತಿಯಾಗಿದೆ ಮನಕೆ
ಶಾಂತಿ ಇಲ್ಲದ ನೆಪಕೆ
ಉರುಳುತಿದೆ ಬಾಳ ಬಂಡಿ
ಅರ್ಥವಿಲ್ಲ ಜೀವನಕೆ

ನೋವು ನಲಿವಿನ ಆಗರ
ಬದುಕಿನ ಮಾಹಾಸಾಗರ
ಕಷ್ಟಗಳ ಅಲೆಯೆದ್ದೆದ್ದು
ಅಪ್ಪಳಿಸುತ್ತಿದೆ ಬಾಳ ತೀರ

ಎಚ್ಚೆತ್ತುಕೊಳಬೇಕು ಈಗಲೇ
ದಾರಿ ತಪ್ಪುವ ಮುನ್ನ
ಅರಿತು ಮುನ್ನಡಿಯಿಡಬೇಕು
ಜಾರಿ ಬೀಳುವ ಮುನ್ನ

ಅರಿವಿರದ ದಾರಿಯ ಬಿಟ್ಟು
ಅರಿತು ಮುನ್ನಡೆದಾಗ 
ದಾರಿಯದು ಹೂ ಹಾಸು
ನಳನಳಿಸುವುದು ಮನಸು

ಅರಿವಿರಬೇಕು ಮನುಜಂಗೆ
ಜಗದ ರೀತಿ ನೀತಿಗಳಲಿ
ಎಲ್ಲರೊಳಗೊಂದಾಗಿ 
ಬದುಕಬೇಕು ಬಾಳಿನಲಿ

           .ಶೈಲೂ.........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ