Posts

Showing posts with the label 198. ಮಂಕಾಯ್ತು ಮನವೇಕೋ

198. ಮಂಕಾಯ್ತು ಮನವೇಕೋ

Image
ಮಂಕಾಯ್ತು ಮನವೇಕೋ ಉಕ್ಕುಕ್ಕಿ ಬರುತ್ತಿದೆ ದುಃಖ ನಗಬೇಕೆಂದರೂ ನಗಲಾಗದೇ ಮನ ಹಿಡಿದಿಟ್ಟಿದೆ  ನಗುವ ಹೇಳಬೇಕೆಂದರೂ ಹೇಳಲಾರದಾ  ನೋವು ಬಂಧಿಸಿಟ್ಟಿದೆ ಹೃದಯ ಮನದ ಭಾವಗಳು ಭಾವುಕವಾಗಿ ಬಡಬಡಿಸಲಾರಾದೇ ಮೌನತಾಳಿ ನಿಂತಿದೆ ಕರಿಮೋಡಗಳು ಕವಿದು ಮನಕೆ ನಗೆಯೇ0ಬ ಸೂರ್ಯನಾ ಮರೆಮಾಚಿ ನಿಂತಿದೆ ನೆನಪು ಗಳ ಸರಮಾಲೆ ಕಣ್ಮುಂದೆ ತೂಗುತಿದೆ ಮಧುರ ಮೈತ್ರಿಯಾ ಮರೆಯಲು ಮನಸ್ಸಿಲ್ಲ ನೆನೆಪಾಗಲು  ನಾ ಮರೆತಿಲ್ಲ ನಿನ್ನ ಸನಿಹಕ್ಕೆ ನಾ ಬರಲಾಗುತಿಲ್ಲ ದೂರವಿರಲೆಕೋ ತನು ಛಿದ್ರವಾದಂತಾ ನೋವು ಹೇಗೆ ಬದುಕಲಿ  ಹೇಳು ಪ್ರಿಯ ಮಾಧವಾ ನೀನಿಟ್ಟಂತೆ  ನಾನಿರುವೆ ಕೊಟ್ಟದ್ದೆ ಅಮೃತ ಫಲವೆನುವೆ ನೀ  ಬಂದರೂ, ಬರದಿದ್ದರೂ ಇಲ್ಲಿದ್ದರೂ, ನೀ ಎಲ್ಲೇ ಇದ್ದರೂ ನಿನ್ನ ಕ್ಷೇಮ ಬಯಸುತ್ತಾ ಹಿಡಿ ಜೀವವಾಗಿ ಯುಗ ಕಳೆದರೂ ಕಾಯುವಳು ನಿನಗಾಗಿ ನಿರಂತರ ಕಾಯುವಿಕೆಯನ್ನೇ ವರವಾಗಿ ಪಡೆದ ಈ ರಾಧೇ.....                 ಶೈಲೂ......