288 ವಿಧವೆ_ಹೆಣ್ಣಿನ_ಗೋಳು

#ಚಿತ್ರಕಾವ್ಯ_ಅಭಿಯಾನ_೧೮

#ವಿಧವೆ_ಹೆಣ್ಣಿನ_ಗೋಳು

(ರುಬಾಯಿ ಮಾದರಿಯಲ್ಲಿ )

ಹೆಣ್ಣಾಗಿ ಹುಟ್ಟಿದ್ದೇ ಶಾಪ
ದೇವಾ ಇದೆಂಥಾ ಪರಿತಾಪ
ಹುಟ್ಟಿನಿಂದ ಸಾವಿನವರೆಗೂ ಗೋಳು
ನಾ ಬೇಡಿ ಬಂದಿದ್ದೇನೆ ಈ ಪಾಪ?

ಬಾಲ್ಯದಲ್ಲಿ ತಾಯಿತಂದೆಯಾಸರೆ
ಯೌವನಕೆ ಗಂಡನಾಸರೆ
ಮುಪ್ಪಿನ ಕಾಲಕ್ಕಂತೆ ಮಕ್ಕಳು
ಬಾಳೆಲ್ಲವೂ ಮತ್ತೊಬ್ಬರ ಕೈಸೆರೆ

ಮಕ್ಕಳಿದ್ದರೆನೇ ನಾಕ
ಬಂಜೆಯಾದರಾಯ್ತು ನರಕ
ಕೈಹಿಡಿದವ ಕಣ್ಮುಚ್ಚಿದರಂತೂ
ಸಾಗಿಸಲ್ಹೇಗೆ ಈ ಒಂಟಿ ಬದುಕ?

ದುಡಿಮೆ ಇದ್ದರಷ್ಟೇ ಬಾಳು
ಒಂದೊಪ್ಪತ್ತು ಗಂಜಿ ಕೂಳು
ಕಂಡವರ ಕೈಸೆರೆಯಾದರಾಯ್ತು
ಸಾಕು ಗಂಡನಿಲ್ಲದ ವಿಧವೆ ಗೋಳು

ಇಷ್ಟೊ ಅಷ್ಟೋ ಇದ್ದರೆ ಆಸ್ತಿ
ಬಂಧುಗಳ ತೋರಿಕೆ ಪ್ರೀತಿ ಜಾಸ್ತಿ
ಆಸ್ತಿಗೆ ಬಾಂಧವರಲೇ ಕಿತ್ತಾಟ ಕಚ್ಚಾಟ
ಒಬ್ಬರಿಗೊಬ್ಬೊಬ್ಬರಲೂ ಕುಸ್ತಿ

ಸಾಕು ಮಾಡು ಪ್ರಭುವೇ ಈ ಜನ್ಮ
ಬೇಡವೆಂದಿಗೂ ಹೆಣ್ಣಾಗುವ ಕರ್ಮ
ಸ್ವಂತಿಕೆಯಿಲ್ಲದ ಬದುಕೇತಕೆ ಹೇಳು?
ಇದೇ ಏನು ನಿನ್ನ ಸೃಷ್ಟಿಯ ಧರ್ಮ?

ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ