Posts

Showing posts with the label 113.ಮನವೊಂದು ಮರ್ಕಟ

113.ಮನವೊಂದು ಮರ್ಕಟ

Image
ಮನವೊಂದು ಮರ್ಕಟ ******************** ಮನವೊಂದು ಮರ್ಕಟ ಅದಕಿಲ್ಲ ನಿರ್ಬಂಧ ಅಲ್ಲೊಮ್ಮೆ ಇಲ್ಲೊಮ್ಮೆ ನೆಗೆಯುತಿಹುದು ಚಂಚಲತೆ ಮನದಲ್ಲಿ ದೃಢವಿಲ್ಲ ನಿಲುವಿನಲ್ಲಿ ನಾನೆಂಬ  ಹಮ್ಮಿನಲಿ  ಮೆರೆಯುತಿಹುದು ಅರಿವಿರದ ಪದಗಳಲ್ಲಿ ಚಿತ್ತಚಾಂಚಲ್ಯದಲಿ ಗುರಿಯಿರದ  ಹಾದಿಯಲಿ ನಡೆಯುತಿಹುದು ಅಮೃತತೆಯ ಫಲಬಿಟ್ಟು ಕಂಡದ್ದೆ  ಸಿಹಿಯೆಂದು ಸಿಕ್ಕೆಡೆಗೆ ಕೈಚಾಚಿ  ನಡೆಯುತಿಹುದು ಹೇ ದೇವ  ಕರುಣಿಸೋ ಹಾಕದಕೆ ಕಡಿವಾಣ ಘೋರ ಶಿಕ್ಷೆಯ ನೀಡಿ  ಮುನ್ನಡೆಸು  ಕೈ ಹಿಡಿದೆಂದು ಬೇಡುತಿಹುದು.......                          ಶೈಲೂ.........