302 ಕೊಳಲ ಸವಿಗಾನ

ಸಾಲಿಗೊಂದು ಕವನ##

ದೂರದ ಕರೆಯೊಂದು ಸೆಳೆಯುತಿದೆ
*******************************

ಎಲ್ಲಿಂದಲೋ ಕೇಳುತಿದೆ ಕೊಳಲ ಸವಿಗಾನ
ನನ್ನ ಪಾಲಿಗದುವೆ ಅಮೃತ ಸುಧಾಪಾನ
ಗರಿಗೆದರಿ ಹಾರುತಿದೆ ಮನಸು ಮಾಧವನ ನೆನೆದು
ಮನದಲಿ ನವಿರಾದ ಕಂಪನ ಸವಿಗನಸ ಹೊಸೆದು

ತೆರೆತೆರೆಯಾಗಿ ಬರುತಿದೆ ಮಧುರ ಸ್ವರದಾಲಾಪ
ಎದೆಯಲ್ಲಿ ನವರಾಗ ಹೊಮ್ಮುವ ಒಲವ ಪ್ರತಾಪ
ಎದೆಯಲಚ್ಚೋತ್ತಿದೆ ಮಾಧವನ ಮೋಹಕ ರೂಪ
ಆದರೆಕೋ ಮುನಿಸು.. ತುಸು ಕೋಪದ ತಾಪ😔

ದೂರದಲಿ ಕರೆಯೊಂದು ಬಳಿಸಾರಿ ಕರೆಯುತಿದೆ
ನಿಂತಲ್ಲಿ ನಿಲಲಾರದೆ ಮನವು ಚಡಪಡಿಸುತ್ತಿದೆ
ಕಾಣದೇ ನಿಲಲಾರೆ ಮಾಧವನ  ಮರೆತು
ಓಡುವುವು ಮುನಿಸವನ ಕಂಡೊಡನೆ ಮರೆತು

ಅವನೆನ್ನ ಜೀವ, ನವಿರಾದ ಸವಿಭಾವ..!!
ರಮಿಸುತಲಿ ಮರೆಸುವನು ಮನವ ಹಿಂಡುವ ನೋವ
ಮಾಧವನ ಮರೆತರೆಕ್ಷಣವೂ ಜೀವಿಸದು ಈ ಜೀವ
ಬೀಸಿದನೇಕವನು ತನ್ನ ಮಾಯೆಯ ಪ್ರಭಾವ..!!

          ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ