273, ಶರಣರ ಸಂಗ ಹಾಲ್ಜೇನು

#ಚಿತ್ರಕಾವ್ಯ_ಅಭಿಯಾನ_೩೫

#ಶರಣರ_ಸಂಗ_ಹಾಲ್ಜೇನು

ಶರಣರ ಸಂಗವೇ ಹಾಲ್ಜೇನು
ಮಾಡು ಸತ್ ಶರಣರ ಸಂಗ
ಶರಣರ ವಚನವೇ ದಾರಿದೀಪ
ಅನುಸರಿಸಿ ತೊಡೆ ಮನದ ತಾಪ

ಶರಣರೇ ಶಿವಸ್ವರೂಪಿ ಜಂಗಮ
ಭಕ್ತಿಯಿಂದಲಿ ಮಾಡು ಪ್ರಣಾಮ
ಶರಣರ ನುಡಿಯೇ ಗೀತಾಮೃತ.!
ಕೇಳಿದರೀ ಜನ್ಮ ಧನ್ಯ ಅನವರತ.!

ಶರಣರಂತೆ ಶಿವನಲ್ಲಿ ಮನವನಿಟ್ಟು
ಅರಿತುಕೊ ನಿತ್ಯ ಸತ್ಯದ ಗುಟ್ಟು..!
ಶರಣರಂತೆಯೇ ಸತ್ಯವ ಹುದುಕು
ಕತ್ತಲಳಿದು ಬೆಳಕಾಗದೇ ಬದುಕು.?

ಭಜಿಸು ಸದಾ ಶಿವನ ನಾಮವ
ನೀಡಲಾರನೇ ಅವ ಸುಜ್ಞಾನವ.!
ಬೆಳೆಸು ದಿವ್ಯಜ್ಞಾನದ ವೃಕ್ಷವ
ನೀಡುವುದು ನಿಜದೇ ಸತ್ಫಲವ.!

ಉದಯಿಸಲಿ ಸುಜ್ಞಾನದ ಸೂರ್ಯ
ಹರಡುತ್ತ ಎಲ್ಲೆಡೆ ದಿವ್ಯ ಪ್ರಭೆಯ.!
ತೊಲಗಲಿ ಅಜ್ಞಾನದ ಮೌಢ್ಯದ ತೆರೆ
ಬೆಳಗಲೆಲ್ಲೆಲ್ಲೂ  ಶಾಂತಿಯ ಕಾಂತಿ ಪ್ರಭೆ.!

        ಡಾ : B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ