89.ಬದುಕು - ಬವಣೆ
ಚಿತ್ರಕ್ಕೊಂದು ಕವನ## ಬದುಕು - ಬವಣೆ ಯಾಕಿಂಗಾಯ್ತೋ ಅಣ್ಣಾ ಸ್ಯಾನೇ ಕಷ್ಟ ಜೀವ್ನ ಬದ್ಕೊದ್ಯಾ0ಗೆ ಹೇಳು ಕತ್ಲಾಗೋಯ್ತ್ ನಂಬಾಳು ಬೆಳೆ ಒಣಗೋಗ್ತಿದ್ದಾಗ ಮಳೆ ಬರ್ಲಿಲ್ಲಾ0ತ್ಕಾಯ್ದೋ ಮಳೆ ಬಂದ್ ಕೊಚ್ಕೊಂಡೋಯ್ತ್ ನಾಟಿ ಮಾಡಿದ್ ಪೈರೂ ರಾಸ್ಗಳ್ಗೆ ನೀರಿಲ್ದೆ ಮೇವಿಲ್ದೆ ಸಾಯೋಹಂಗಾಗಿತ್ತಲ್ಲೋ ಮಳೆ ಸುರ್ದ್ ನೆರೆ ಬಂದು ಎಲ್ಲಾ ಕೊಚ್ಚೋಯ್ತಲ್ಲೋ ಮನೆಯಿಲ್ಲ ಮಾಡಿಲ್ಲ ತಲೆ ಮೇಲೊಂದ್ ಸೂರಿಲ್ಲ ಉಣ್ಣಕ್ಕಿಲ್ಲ ತಿನ್ನಕ್ಕಿಲ್ಲ ಇದ್ದಿದ್ನೆಲ್ಲ ಕಳ್ಕ0ಡವಲ್ಲ ಎತ್ಲಾಗ್ ನೋಡುದ್ರೂ ನೀರು ಮಳೆದ್ಯಾವರಿಗ್ ಕರುಣೆಯಿಲ್ಲ ಇದ್ದಿದ್ದ್ ಬದ್ದಿದ್ದ್ ಕಾಳು ಕಡ್ಡಿ ನೀರಿನ್ ಪಾಲು ಆಯ್ತಲ್ಲ ತಿನ್ನಾಕ್ ಒಸೀನು ಹಿಟ್ಟಿಲ್ಲದೇ ಎಂಗ್ ಸಾಕೋದ್ ಮಕ್ಳುಮರೀನ ಗುಳೆ ಹೊಂಟು ಕೂಲಿ ಮಾಡಿ ಸಾಗಸ್ಬೇಕು ಕಷ್ಟದ್ಜೀವ್ನ ಶೈಲೂ.....