291ಬಿಡು_ಮುನಿಸು_ಕೊಡು_ಮನಸು

#ಚಿತ್ರಕಾವ್ಯ_ಅಭಿಯಾನ_೧೪

#ಶೀರ್ಷಿಕೆ

#ಬಿಡು_ಮುನಿಸು_ಕೊಡು_ಮನಸು

ಕೋಪವೇಕೆ ಚಿನ್ನ
ನೀ ನಗುನಗುತಿರೇ ಚೆನ್ನ
ಚಿನಕುರಲಿ ಮಾತಿಲ್ಲದೇ
ನೀ ಮೌನವಾದರೇನು ಚೆನ್ನ?

ಹಂಬಲಿಸಿ ನಾ ಬಂದೆ
ಚೆಲುವ ಮೊಗ ನೋಡಲೆಂದೇ
ಆದರೆಕೋ ಈ ಮುನಿಸು
ಮುದ್ದು ಮುಖ ಬಾಡಿದೆ..!!

ನೀನಿಲ್ಲದೇ ಸೊಗವೆಲ್ಲಿ?
ನಲಿವಿರದು ಬಾಳಲ್ಲಿ
ಚಂದ್ರನಿಲ್ಲದ ಬಾನಂತೆ
ನೀನಿಲ್ಲದೇ ತಂಪೆಲ್ಲಿ?

ಅರಳಿರುವ ಹೂ ನೋಡು
ದುಂಬಿಯದೇ ಸವಿ ಹಾಡು
ಬಿರಿದಿದೆ ಮನ ಮಲ್ಲಿಗೆ
ಮುದುಡಿದರೆ ಘಮ್ಮೆನ್ನದು..!!

ಬೇಡ ಕಂಬನಿ ಧಾರೆ
ದುಗುಡವೇಕೆ ನೀರೆ?
ಏನಿದೆ ಮನದಲಿ ನೋವು
ಹೇಳಿ ಬಿಡು ಮನಸಾರೆ..!!

ಬಿಡುಮುನಿಸು ಕೊಡು ಮನಸು
ನೀನಲ್ಲವೇ ನನ್ನ ಕನಸು?
ನೀ ಮೌನವಾದರೆ ಹೀಗೆ
ಎಲ್ಲಿದೆ ಬಾಳಲ್ಲಿ ಸೊಗಸು?

            ಶೈಲೂ......
ಡಾ: ಶೈಲಜಾ ರಮೇಶ್

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು