Posts

Showing posts with the label 68.ನೀನಿಟ್ಟ ಹೆಜ್ಜೆ

68.ನೀನಿಟ್ಟ ಹೆಜ್ಜೆ

Image
ನೀನಿಟ್ಟ ಹೆಜ್ಜೆ ಮನದ ಬಾಂದಳಕೆ ನೀನಿಟ್ಟ ಹೆಜ್ಜೆ ಎಳೆಗರುವ ನೊಸಲಿನಲಿ  ಉಲಿದಂತೆ ಗೆಜ್ಜೆ || ನೀ ಸುಳಿದ  ಆ ಘಳಿಗೆ ನೆರೆಬಂತು ಹೊಳೆಗೆ ಹಸಿರು ಮೇಳೈಸಿತ್ತು ಪೂರ ಧರೆಗೆ. || ಸುಳಿದಂತೆ ತಂಪಾದ ನವಿರು ಗಾಳಿ ಸೆಳೆದೆಳೆದಡಗಿಸಿದಂತೆ ಕೆನ್ನೆಯ ಸುಳಿ. || ತಂಪಾದ ಭೂಗರ್ಭದಿ ಎಳೆಗರಿಕೆ ಮೊಳೆತಂತೆ ಸಂಜೆ ಸೂರ್ಯನ ಹೊಂಬೆಳಕ ಹೊಳಪಂತೆ  || ಹೊನ್ನಾಗಿತ್ತು ಮಣ್ಣು ಹಬ್ಬಿತ್ತು ತರುಲತೆ ಎದೆಯ ಹೊತ್ತಿಗೆಯ ತುಂಬೆಲ್ಲ ನಿನ್ನದೇ ಕಥೆ  || ಜಡವಾಗಿದ್ದ ಬದುಕಲ್ಲಿ ಬಿರಿದಂತೆ ಹೂವು ಮರೆಯಾಗಿತ್ತು ಎಲ್ಲ ಜೀವಜೀವದ ನೋವು  ||              ಶೈಲೂ......