286 ಹಾರುತಿದೆ_ಮನದಹಕ್ಕಿ

#ಚಿತ್ರಕಾವ್ಯ_ಅಭಿಯಾನ_೨೦

#ಹಾರುತಿದೆ_ಮನದಹಕ್ಕಿ

ಇದು ಹುಚ್ಚುಕೋಡಿ ಮನಸು 
ಹಾರುತಿದೆ ಹೊತ್ತು ನೂರಾರು ಕನಸು
ನನಸಾಗುವುದಾವುದೋ ಕಾಣೆ
ಬರೀ ಆಸೆಗಳ ಮೂಟೆ ಹೊತ್ತ ಜಾಣೆ

ಹದಿ ಹರೆಯದ ಹುಚ್ಚುಕುದುರೆ
ತೇಲುತಿದೆ ಮನ ಕುಡಿದಂತೆ ಮದಿರೆ
ತಣಿಯಬಹುದೇ ಕಾಮನೆಗಳ ದಾಹ
ಹುಚ್ಚೆದ್ದು ಕುಣಿಯುತ್ತಿದೆ ಕಾಣದ ಮೋಹ

ಬಯಕೆಗಳ ರೆಕ್ಕೆ ಕಟ್ಟಿ ಬಾನಿಗೆ ಹಾರಿ
ಸಿಗದ ಮರೀಚಿಕೆಯ ಬೆನ್ನತ್ತಿ  ಏರಿ
ಘಾಸಿಯಾಯ್ತು ಮನಕೆ ಬೆಂಕಿಯ ಸಂಗ
ಬಲಿಯಾಯ್ತು ಆಸೆಯ ಬೆಂಕಿಗೆ ಪತಂಗ

ಕಟ್ಟಿಕೊಳಬೇಕು ಮತ್ತೆ ಚಂದ ಬದುಕು
ಹಿಂದೆ ಬರದಂತೆ ಕಾಯುತ ಅಂಥ ದುಡುಕು
ಮನವ ಹಿಡಿದಿಟ್ಟು ಬಿಗಿದು ಭದ್ರ ಕೋಟೆಯೊಳಗೆ
ನುಸುಳದಂತೆ ಆಸೆ ಕಾರ್ಮೋಡ ಮನದೊಳಗೆ

ಭಾವ ಬಲವಾದರೆ ಮನ ಉಕ್ಕಿನ ಕೋಟೆ
ಯಾವುದೂ ಸುಳಿಯಲಾರದು ಹುಡುಕುತ ಬೇಟೆ
ನೋವಿರಲಿ ನಲಿವಿರಲಿ ಅದು ನನ್ನ ಹಣೆಬರಹ
ಹುಡುಕಿ ಹೋಗಲಾರೆ ಇನ್ನು ಅಲೆಮಾರಿ ತರಹ

ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ