287 ಹರಿಕಥಾಮೃತಸಾರ

#ಚಿತ್ರಕಾವ್ಯ_ಅಭಿಯಾನ_೧೯

#ಹರಿಕಥಾಮೃತಸಾರ

ಶ್ರೀಗುರುವಿನಡಿಗೆರಗಿ
ಗಣಪತಿಗೆ ಶರಣೆಂದು
ಸರಸ್ವತಿಯ ಪದತಲದಿ
ವಂದಿಸುತ ಪೇಳುವೆನು
ಶ್ರೀ ಹರಿಕಥಾಮೃತಸಾರ
ಬನ್ನಿರೈ ಬನ್ನಿ ಪುರಜನರೆ
ಬನ್ನಿರೈ ಬನ್ನಿ ಹಿರಿಜನರೆ

ದೇವನೊಬ್ಬನೇ ಕೇಳಿ
ವಿವಿಧ ರೂಪವ ತಾಳಿ
ಅವರವರ  ಭಾವಕ್ಕೆ
ಅವರವರ  ಭಕುತಿಗೆ
ಅವರವರಲೋಂದಾಗಿ
ಪೊರೆಯುತಿಹನವನು
ಸಕಲ ಜನ ಸಾಗರವ

ಅಮ್ಮನೆಂದರೆ ಲಾಲಿಸುತ
ಅಪ್ಪನೆಂದರೆ ಪೋಷಿಸುತ
ಗುರುವೆನ್ನಲು ಜ್ಞಾನವನಿತ್ತು
ಸಖನೆನ್ನೆ ಸಕಲ ಸುಖವಿತ್ತು
ಸರಿಯಾದ ಮಾರ್ಗದಲವ
ಕೈಹಿಡಿದೆತ್ತಿ ಮುನ್ನಡೆಸುತ್ತಾ
ಕಾಯುತಿಹನೆಲ್ಲರ ಶ್ರೀ ಕೇಶವ

ಅವನು ದೂರದಲೇನಿಲ್ಲ
ಇಹನವನು ಬಳಿಯಲ್ಲೇ
ಮಾಯೆಯ ಮುಸುಕೆಳೆದು
ನಗುತಿಹನು ಎಲ್ಲರ ನೋಡಿ
ಮನವಿಟ್ಟು  ಅವನಲ್ಲೇ
ಸರಿಸಿದರೆ ಮಾಯೆಯ ತೆರೆ
ಕಾಣುವನವ ಶ್ರೀ ಮಾಧವ

ಇದು ಬರೀ ಪುರಾಣವಲ್ಲ
ಆಸ್ತಿಕ ಭಕ್ತರ ನಿಜಪ್ರಾಣ
ನಂಬಿದರೆ ಜಯವುಂಟು
ಜಯವಿರೇ ಭಯ ಎಲ್ಲುಂಟು
ಕ್ಷಣಕ್ಷಣವೂ ನಂಬಿದವರ
ಪೊರೆವ ನಮ್ಮ ಬಾಂಧವ
ಬನ್ನಿರೆಲ್ಲರವನ ಭಜಿಸುವ

ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ