279 ಅವನೊಲಿಯುವ_ಪರಿ

#ಚಿತ್ರಕಾವ್ಯ_ಅಭಿಯಾನ_೨೯

#ಶೀರ್ಷಿಕೆ

#ಅವನೊಲಿಯುವ_ಪರಿ

ಆಗಸಕೆ ಕೈಚಾಚಿದರೆ ನಿಲುಕೀತೇ ಗಗನ.?
ಕೈಗೆಟುಕಬೇಕೆಂದರೆ ಶತ ಪ್ರಯತ್ನ ಬೇಕಣ್ಣ
ನಿಂತಲ್ಲಿಂದಲೇ ಎಲ್ಲ ಬೇಕೆಂದು ಕೈಚಾಚಲು
ಅದೇನು ತೊತ್ತೇ ಕೇಳಲು ನಿನ್ನ ಅಹವಾಲು.?

ಪ್ರಯತ್ನವಿದ್ದರೇ ತಾನೇ ಸುಖ ಭೋಗಗಳು ಸ್ವಂತ
ತೀವ್ರತರ ಪರಿಶ್ರಮವಿರೇ ಅಂಗೈಲೇ ದಿಗಂತ
ಬರೆದೇ ಕನಸು ಕಂಡರಾಗದು ಎದ್ದೇಳು ಮರುಳ
ಕುಳಿತುಂಡವರು ಬಾಳಿ ಬದುಕಿ ಹೆಸರಾದದ್ದು ವಿರಳ.!

ಹೆಜ್ಜೆಯಿಡು ನನಸಾಗುವೆಡೆಗೆ ನೇಯ್ದ ಕನಸನು
ಶ್ರದ್ಧೆಯಿಡು ಮಾಳ್ಪ ಕಾರ್ಯದಲಿ ಊರಿ ಮನಸನು
ಸಂಘ ಜೀವನ ನಮ್ಮದು ಅತಿಶ್ರೇಷ್ಠ ಮಾಡು ಸತ್ಸಂಗ
ನಾನೇ ಹೆಚ್ಚೆಂಬ ಗರ್ವಭಾವದಲಿರೆ ಅಭಿಮಾನ ಭಂಗ.!

ಎಸೆ ಕಾಮಕ್ರೋಧ  ಮತ್ಸರ ಅರಿಷಡ್ವರ್ಗದ ಕಸವ
ಬಿತ್ತಿ ಬೆಳೆ ಕರುಣೆ ಪ್ರೇಮ ಮಮತೆ ವಾತ್ಸಲ್ಯದ ವನವ
ಸಚ್ಚಾರಿತ್ರ್ಯವೇ ಸತ್ಫಲ ನೀಡುವ ಕಲ್ಪವೃಕ್ಷ ಕಾಣೋ
ಸನ್ನಡತೆಯೇ ಆ  ದೇವನೊಲಿಸುವ ಪರಿ ಮಾಣೋ.!

✍️ ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ