289 ಮನದಲುದಿಸಿದ_ಭಾವ

#ಚಿತ್ರಕಾವ್ಯ_ಅಭಿಯಾನ_೧೬

#ಮನದಲುದಿಸಿದ_ಭಾವ

ಚಿತ್ತ ಭಿತ್ತಿಯಲಿ ಬಿತ್ತಿದ್ದ  ಎರಡಕ್ಷರವು
ಮೊಳೆತು ನೀಡಿದೆ ಬರವಣಿಗೆಯ ಫಸಲ
ಅಧ್ಯಯನದ ನೀರು ರಸಗೊಬ್ಬರವೆರೆದು
ಸಲಹಿದರೆ ಅತಿ ಕಾಳಜಿಯಲಿ ಬರಹ ಸಫಲ

ಬರೆದಿದ್ದೆಲ್ಲವೂ ಮಹಾಕಾವ್ಯವಾಗಬೇಕಿಲ್ಲ
ಕವಿ ಕಬ್ಬಿಗರು ಬರೆದಿಟ್ಟ ಮಹಾ ಗ್ರಂಥದಂತೆ
ಮನದ ಮದನಿಕೆಗೆ ಮುದವಾದರೆ ಸಾಕು
ಬೇರೇನಾಸೆಯಿಲ್ಲೆನಗೆ ಜೀವ ನಿಶ್ಚಿಂತೆ

ಮನದಲುದಿಸಿದ ಬಾವವ ಚಂದದಕ್ಷರದ
ಚೌಕಟ್ಟಿನಲಿ ಬಂಧಿಸಿ ಪದಕ್ಕೆ ಪದ ಬೆಸೆಯಬೇಕು
ಭಾವಪೂರ್ಣ ಪದಗಳಲಿ ಸದ್ಭಾವನೆಯ ತುಂಬಿ
ಓದುಗರ ಮನ ಹಿಡಿದಿಡುವಂತೆ ಹೊಸೆಯಬೇಕು

ಬರೆದೆನೆಂಬ ಹಮ್ಮು ಭಾದಿಸದಿದ್ದರೆ ಸಾಕು
ರೆಕ್ಕೆಪುಕ್ಕ ಕಟ್ಟಿ ಆಗಸದಲಿ ಹಾರಿ ತೇಲಿ
ದಾಸರ ಮನೆಯ  ದಾಸನಾನೆಂಬಂತಿರಲಿ
ಮನಕೆ ಹಾಕಬೇಕು ಸೌಮ್ಯ ಸಭ್ಯತೆಯ ಬೇಲಿ

ನಾ ಹೆಚ್ಚೆ0ಬ ಮದ ತಲೆಗೇರಿಬಿಟ್ಟರೆ ಕಷ್ಟ
ಅಲ್ಲೇನೂ ಇರದು ಬರಹದಲ್ಲಿ ತಿರುಳು
ಮೂಡಿದಕ್ಷರವೆಲ್ಲರ ಮನಸೆಳೆದರಷ್ಟೇ
ಬೆಳಕು ಮೂಡಿದಂತೆ ಸಂತಸ, ಕಳೆದು ಇರುಳು

    ಡಾ: B.N. ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ