Posts

Showing posts with the label 277 ರೂಪದ_ಗತ್ತು

277 ರೂಪದ_ಗತ್ತು

Image
#ಚಿತ್ರಕಾವ್ಯ_ಅಭಿಯಾನ_೩೩ #ರೂಪದ_ಗತ್ತು ಚಂಚಲ ಚಿತ್ತ ಅಡ್ಡಾಡಿ ಅತ್ತಿತ್ತ ಮತ್ತಲ್ಲಿಗೇ ಬಂತು ಅಹಮಿನ ಸುತ್ತ..!! ಕಲ್ಪನೆಯ ಮೊತ್ತ ಗಿರಕಿ ಹೊಡೆಯುತ್ತ ಚೆಲುವ ಚಂದ್ರಿಕೆ ತಾನೆಂದೆನುತ್ತಾ..!! ನಾ ಸುರದ್ರೂಪಿ ಉಳಿದವರೆಲ್ಲ ಪಾಪಿ ಸೌಂದರ್ಯದೇವತೆ ಅತಿ ಶೀಘ್ರ ಕೋಪಿ..!! ದರ್ಪಣದ ತುಂಬ ತನ್ನದೇ ಬಿಂಬ ಅಣಕಿಸಿದಂತಾಯ್ತು ಆ ಪ್ರತಿಬಿಂಬ..!! ಚಂದ್ರ ಮೊಗದ ಬಾಲೆ ನೋಡ ನೋಡುತ್ತಲೇ ಕರಗಿತ್ತವಳ ರೂಪ ಏನಿದರ ಲೀಲೆ..!! ಸುಕ್ಕುಗಟ್ಟಿತು ಮುಖ ಕಪ್ಪಿಟ್ಟಿತು ರೂಪ ಬೆತ್ತಲಾಯಿತು ಎಲ್ಲ ಇಳಿದಿತ್ತು ಪ್ರಾಯ..!!  ರೂಪಮದದ ಗತ್ತೆಲ್ಲ ನಿನ್ನ ಸ್ವತ್ತೇನಲ್ಲ ಕಾಲ ಮಾಗಿದ ಮೇಲೆ ಜಾರಿ ಹೋಗುವುದೆಲ್ಲ..!!     ಡಾ:B.N. ಶೈಲಜಾ ರಮೇಶ್