Posts

ಸ್ವಾಮಿ ವಿವೇಕಾನಂದರು

Image
                 ಓಂ ಶ್ರೀ ಗಣೇಶಾಯ ನಮಃ                   ಓಂ ಶ್ರೀ ಗುರುಭ್ಯೋ ನಮಃ  ಅಷ್ಟಕವರ್ಗದ ಫಲ ನಿರೂಪಣೆಗಾಗಿ   ಭಾರತದ ಅದ್ಯಾತ್ಮಿಕ ಸಿಂಹ  ಸ್ವಾಮಿ ವಿವೇಕಾನಂದರ  ಜಾತಕದ ವಿಶ್ಲೇಷಣೆ     ಸ್ವಾಮಿ ವಿವೇಕಾನಂದರ ಜನನವು ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ಆಯಿತು ಮತ್ತು ಅವರ ಮರಣವು ಜುಲೈ 4, 1902 ರಂದು ಪಶ್ಚಿಮ ಬಂಗಾಳದ ಬೇಲೂರು ಮಠದಲ್ಲಿ ರಾತ್ರಿ ಸುಮಾರು 9 ಗಂಟೆಗೆ ಸಂಭವಿಸಿತು.    ಜನನ ವಿವರಗಳು * ದಿನಾಂಕ: ಜನವರಿ 12, 1863 * ಸ್ಥಳ: ಕೋಲ್ಕತ್ತಾ (ಕಲ್ಕತ್ತಾ), ಪಶ್ಚಿಮ ಬಂಗಾಳ * ಪೂರ್ವನಾಮ: ನರೇಂದ್ರನಾಥ ದತ್ತ * ವಿಶೇಷತೆ: ಇವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.  ------------------------------  ಮರಣ ವಿವರಗಳು * ದಿನಾಂಕ: ಜುಲೈ 4, 1902 * ಸಮಯ: ರಾತ್ರಿ 9:10 ರ ಸುಮಾರಿಗೆ (ಮಹಾ ಸಮಾಧಿ) * ಸ್ಥಳ: ಬೇಲೂರು ಮಠ, ಹೌರಾ ಜಿಲ್ಲೆ, ಪಶ್ಚಿಮ ಬಂಗಾಳ * ವಯಸ್ಸು: ನಿಧನರಾದಾಗ ಅವರಿಗೆ 39 ವರ್ಷ ವಯಸ್ಸಾಗಿತ್ತು.      ಸ್ವಾಮಿ ವಿವೇಕಾನಂದರ ನಿಖರವಾದ ಜನನ ಸಮಯ  (ಜನವರಿ 12, 1863, ಮುಂಜಾನೆ 6:33 ಕ್ಕೆ, ಸೂರ್ಯೋದಯಕ್ಕಿಂತ ಕೆಲವು ...

ಕವನಗಳು

 ಹಾರೈಕೆ... ಅರಿಕೆ *************** ಕೋರುವೇ ಶುಭಹಾರೈಕೆ ಹೊಸಬಾಳಿಗಡಿಯಿಟ್ಟ ದಿನಕೆ ನಲಿವು ಗೆಲುವಲಿ ಜೊತೆಯಾದ ನವ ಬಾಂಧವ್ಯ ಬೆಸೆದ ಕ್ಷಣಕೆ ಒಲಿದ ಮನವೆರಡು ಕಲೆತು ಸಂಸಾರ ನೊಗವ ಹೊತ್ತು ಬಾಳ ಹಾದಿಯ ಪಯಣ ಜೊತೆಗೂಡಿ ನಡೆದ ದಿನಕೆ ಸರಸವಿರಸಗಳನು ಗೆದ್ದು ನವಿರಾದ ಪ್ರೀತಿಯ ಹೊದ್ದು ಬಾಳ ನೌಕೆಯ ಪಯಣ ನಲಿದು ಸಾಗುವ.ದಿನಕೆ ಶೈಲೂವಿನ ಬಯಕೆಯಿದು ನಲ್ಮೆಯ ಹಾರೈಕೆಯಿದು ದುಃಖ ದುಮ್ಮಾನಗಳ ಮರೆತು ತುಂಬಿ ಬರಲಿ ಹೊಸತು ಸಂಭ್ರಮದ ದಿನವಿಂದು ದುಪ್ಪಟ್ಟಾಗಲಿ ಹರುಷ ಸವಿಯಬೇಕು ಪ್ರೀತಿ ಜೇನು ಅನಂತವಾಗಲಿ ರಸನಿಮಿಷ           ಶೈಲೂ.....  ಪ್ರೇಮ ಸಂಭಾಷಣೆ **************** ಎನಿತು ಚಂದವೇ ಸಖಿ ಮುಗ್ಧಸ್ನಿಗ್ದ ಸೌಂದರ್ಯ ನಕ್ಕರೂ ಕಾಣದಂತ ಮುಗುಳುನಗೆಯ ಮಾಧುರ್ಯ ಹೊಗಳಿದ್ದು ಸಾಕು ಕೃಷ್ಣ ನೀನೇ ಸೌಂದರ್ಯದ ಗಣಿ ನಿನ್ನ ಕಣ್ಣ ಕಾಂತಿಯಲ್ಲೇ ಅಡಗಿಹನು ದಿನಮಣಿ ಇಲ್ಲ ರಾದೇ ನೀನೇ ಚಂದ ಕದಪುಗಳಲಿ ಇಹ ಚಂದಿರ ಅರ್ಧ ತೆರೆದ ನಯನದಲೇ ಇಹುದು ತಾರಾ ಮಂದಿರ ಬಾಯಲ್ಲೇ ಅಡಗಿಸಿರುವೆ  ಚತುರ್ದಶ ಭುವನಲೋಕ ಅರಿಯಲಿ ಹೇಗೇಳು ನಿನ್ನ ಕೃಷ್ಣ ನಾನಾದೆ ಮೂಕ ಬಿಡು ಬಿಡು ಅದೆಲ್ಲ ಸಖಿ ಅರಿಯಲಾಗದ ನಿಗೂಢ ನಿನ್ನ ಸೌಂದರ್ಯ ಸೆಳೆತಕೆ ವಶವಾಗಿ ನಾ ಧಿಗ್ಮೂಢ ತುಂಟತನದ ನೋಟದಲ್ಲೇ ಸೆಳೆದು ಬಿಟ್ಟೆ ಮನಸ್ಸಸನ್ನ ಹೇಳಲೇನಿದೆ ಮಾಧವಾ ನೀನೇ ನನ್ನ ಮನದನ್ನ              ಶೈಲೂ...... ...