Posts

Showing posts with the label 354 Happy mother's day💐💐💐

354 Happy mother's day💐💐💐

Image
Happy mother's day💐💐💐             ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ ಮೊದಲು ಹೊರಬೀಳುವ ಶಬ್ದ “ಅಮ್ಮಾ.” ಎಂದಾಗಿರುತ್ತದೆ. ಮಗು ಬೆಳೆದು ಎಷ್ಟೇ ದೊಡ್ಡವನಾ/ಳಾದರೂ “ಅಮ್ಮ” ಎಂಬ ಆಪ್ತ ಸಂಬಂಧದಿಂದ ಕಳಚಿಕೊಳ್ಳಲು ಸಾಧ್ಯವೇ ಇಲ್ಲ. ಕ್ರೂರ ಹೃದಯದ ಕಟುಕನಿಗೂ “ಅಮ್ಮ” ಎಂಬ ಪದ ಉಚ್ಛರಿಸುವಾಗ ಮನಸ್ಸು ಆರ್ದ್ರವಾಗುತ್ತದೆ.           ‘ಅಮ್ಮ’. ಎಂತಹ ಕ್ರೂರ ಹೃದಯವನ್ನು ಕೂಡ ಒಂದು ಕ್ಷಣಕ್ಕೆ ಹೂವಾಗಿಸಬಲ್ಲ ಏಕೈಕ ಪದ. ಕೇಳಿದ ತಕ್ಷಣ ಮೊಗದಲ್ಲಿ ಕಿರುನಗು ತರಿಸಬಲ್ಲ ಪದ. ಬುದ್ಧಿ ಬಲಿತಿರದ ಒಂದು ಪುಟ್ಟ ಮಗು ಕೂಡ ಕೇಳಿದ ತಕ್ಷಣ ಸಂತಸದಿ ನಲಿಯುವಂತೆ ಮಾಡುವ ಪದ. ಅದರ ಶಕ್ತಿಯೇ ಅಂತಹುದು. ಆ ವ್ಯಕ್ತಿತ್ವವೇ ಅಂತಹುದು. ಆಕೆ ಮಮತಾಮಯಿ. ಪ್ರೀತಿಯ ಸಾಕಾರಮೂರ್ತಿ.           ನಮ್ಮನ್ನು ಒಂಭತ್ತು ತಿಂಗಳುಗಳ ಕಾಲ ತನ್ನ ಗರ್ಭದಲ್ಲಿ ಇಟ್ಟುಕೊಂಡು ಕಾಪಾಡಿ, ಅಲ್ಲಿಂದ ಹೊರಬರುತ್ತಿದ್ದಂತೆ ತನ್ನ ಮಡಿಲಿನಲ್ಲಿ ಮಲಗಿಸಿ ಎ...