221 #ಹೀಗೊಂದು #ನೆನಪು
#ಹೀಗೊಂದು #ನೆನಪು ***************** ಒಂಟಿಯಾಗಿದ್ದಾಗಲೇ ನಂಟು ಬೆಳೆಸಲು ಹಾತೊರೆವ ಗತಕಾಲದ ನೆನಪುಗಳ ಹಾವಳಿ ಕಳೆದುಕೊಂಡವುಗಳ ಗಳಿಸಿಕೊಂಡವುಗಳ ತೊರೆದುಹೋದವುಗಳ ಬೆನ್ನಿಗಂಟಿದ ಬೇತಾಳಗಳ ನೆನಪಿನ ಪ್ರಭಾವಳಿ..! ಒಂದೇತಾಯೊಡಲ ಅಮೃತವ ಕುಡಿದು ಬೆಳೆದ ಸೋದರ ಸಂಭಂದ ಸ್ವಾರ್ಥ ಲಾಲಸೆಯ ಕರಾಳ ಮುಖದ ಸೋಲು - ಗೆಲುವಿನ ಹೆಜ್ಜೆಗುರುತುಗಳ ತರಂಗ ಮನದ ತಿಳಿಗೊಳವ ಮಲಿನತೆಯ ಮಾಡಿ ರಾಡಿಯೆಬ್ಬಿಸಿದ ಬೇಡದ ವಿಚಾರ..! ಪರಿಚಯವೇ ಇಲ್ಲದೆ ಜೊತೆಯಾದ ಸ್ನೇಹಸಂಬಂದ ಭಾವೋತ್ಕರ್ಷವ ಮೀರಿ ಬೆಳೆದ ಪ್ರೇಮಾನುಬಂಧ ಹೆಜ್ಜೆ ಹೆಜ್ಜೆಗೂ ಹರಸಿ ಹಾರೈಸಿ ಪ್ರೋತ್ಸಾಹಿಸಿ ಹುರಿದುಂಬಿಸುವ ಸಂತಸದ ವಿಚಾರ..! ಈ ಒಳಿತು ಕೆಡಕುಗಳ ಕಲಸುಮೇಲೋಗರದ ನೆನಪಿನ ತರಂಗಗಳ ಹೊಯ್ದಾಟ ಮನದಲಿ ಒಮ್ಮೆ ಕಣ್ಣ oಚಲಿ ನೀರು ಮತ್ತೊಮ್ಮೆ ಧೀರ್ಘ ನಿಟ್ಟುಸಿರು ಹಿಂದೆಯೇ ಭಾವೋತ್ಕರ್ಷದ ಸಖೀಗೀತ ಮನದಲಿ..! ಶೈಲೂ..... Shylaja Ramesh