274. ಸತ್ಯಂ ಶಿವಂ ಸುಂದರಂ

#ಚಿತ್ರಕಾವ್ಯ_ಅಭಿಯಾನ_೩೫

#ಸತ್ಯಂ_ಶಿವಂ_ಸುಂದರಂ

ಅಲೆಯದಿರು ಮನವೇ ಅಲ್ಲಲ್ಲಿ
ಬೆಸಗೊಳ್ಳಬೇಕು ಶಿವನಡಿಯಲ್ಲಿ
ಏಕೆ ಹೀಗೆ ಚಂಚಲ ಗೊಳ್ಳುತ್ತಿರುವೇ?
ಶಿವನೇ ಸರ್ವವೆಂಬುದ ಮರೆತಿತುವೆ.!

ಎದ್ದೇಳು.. ಕಾಲು ಕಂಬವನೆ ಮಾಡು
ನಿನ್ನ ಹೃದಯವನ್ನು ಮಂದಿರವ ಮಾಡು
ಶಿರವಾಗಲಿ ಸುಂದರ ಹೊನ್ನ  ಶಿಖರ
ನೆಲೆಗೊಳ್ಳಲಿ ಅಲ್ಲಿಯೇ ಚಂದ್ರಶೇಖರ.!

ಸತ್ಯವೆಂಬುವವನವನೇ ದಿವ್ಯಾತ್ಮ..!
ಶಿವನಲ್ಲೇ ನೆಲೆಗೊಳಿಸು ನಿನ್ನಾತ್ಮ...!
ಸುಂದರವಾಗಬಹುದಾಗ ಬಾಳು...!
ಸತ್ಯಂ  ಶಿವಂ  ಸುಂದರಂ... ಕೇಳು.!

       ಡಾ:B.N. ಶೈಲಜಾ ರಮೇಶ್

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು