296 ದ್ವಿರುಕ್ತಿ_ಕವನ

#ದ್ವಿರುಕ್ತಿ_ಕವನ

ಕದ್ದು-ಕದ್ದು ನೋಡಬೇಡ ಗೆಳತಿ
ಯಾಕ್ಹೀಗೆ ಮುಸಿ-ಮುಸಿ ನಗುತಿ?
ಏನಿದೆ ನನ್ನ ಮೊಗದಲ್ಲಿ ಅಂಥದ್ದು?
ಕಣ್ -ಕಣ್ ಬಿಟ್ಟು ನೋಡುವಂಥದ್ದು?

ಹೇ..ಬೇಡ -ಬೇಡವೋ ದೊರೆಯೇ
ನೀ ಮಾತು - ಮಾತಲ್ಲೇ ಚುಚ್ಚುವೆ
ಪ್ರೀತಿ ಮಾಡಿದರೂ ತಪ್ಪೇನು?
ಹೋಗು - ಹೋಗು ನಾನಿನ್ನ ಒಪ್ಪೆನು

ಹೇ ಕಿಲ - ಕಿಲ ನಗುವ ಜಾಣೆ
ಬಾ ಗಲ- ಗಲ ಮಾತಾಡು ಚೆನ್ನೆ
ಯಾಕೇ ಕೋಪಗೊಳ್ಳುವೆ ನೀನು?
ಗಪ್ -ಚುಪ್ ಎಂದ್ಹೇಳಿದ್ದಕ್ಕೇ ನಾನು?

ಮೆಲ್ಲ - ಮೆಲ್ಲನೆ ಹೆಜ್ಜೆಯಿಡುವ ನೀರೆ
ಮುದ್ದು - ಮುದ್ದು ಮಾತಾಡು ಬಾರೇ
ಕೋಪ ಮಾಡಬೇಡವೇ ಚಿನ್ನಾ
ನೀ ನಗು - ನಗುತ್ತಿದ್ದರೇ ಚೆನ್ನ

ಫಳ - ಫಳನೆ ಹೊಳೆವ ಮೊಗದಲ್ಲಿ
ನಗುವು ಬಿರಿ - ಬಿರಿದು ನಲಿಯಲಿ
ಆ ನಗುಮೊಗದ ಅಂದ ಕಾಣುತ
ನಾ ನಲಿ - ನಲಿದು ಬಾಳುವೆ ಅನವರತ

         ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ