Posts

Showing posts with the label 60.ಮಹಾನ್ಚೇತನಕ್ಕೆ ನಮನ

60 ಮಹಾನ್ಚೇತನಕ್ಕೆ ನಮನ

Image
ಮಹಾನ್ಚೇತನಕ್ಕೆ ನಮನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಆ ಮೂರ್ತಿ ಯೊಳಗಿದ್ದ ಚೈತನ್ಯ ಹಿರಿದು ಜಾತಿಮತ  ಧರ್ಮಗಳ ಮೀರಿದ ಸಂತ  ಅದಕ್ಕೆ ಪ್ರೇಮದಿಂದ ಅಪ್ಪಿದ ಭಗವಂತ ವಿಶ್ವಮಾನ್ಯ ವಿದ್ಯಾಮಾನ್ಯ ನಿತ್ಯ ಪೂಜಿಪ ಹರಿಚರಣ ಆದರ್ಶ ಯತಿ ಪೂರ್ಣಪ್ರಜ್ಞ ಸಹಬಾಳ್ವೆಯ ಅನುಕರಣ ಜ್ಞಾನಿ ವೇದಾಂತ ವೇದ್ಯ ಸಂತ ಪಾಂಡಿತ್ಯ ಪೂರ್ಣ "ಯತಿ ಸಿಂಹ" ಸರ್ವಧರ್ಮ ಸಮಭಾವ ದೃಷ್ಟಿ ವಿಶ್ವೇಶತೀರ್ಥರು ವಿಶ್ವದ ಸಮಷ್ಟಿ ಯತಿಕುಲ ತಿಲಕ ಭಾವೈಕ್ಯತೆಯ ಪ್ರತೀಕ ವಿಶಿಷ್ಟ ವಿಷಯ ಸಹಬಾಳ್ವೆಯ ಪ್ರೇರಕ ಮಾಧ್ವಮತ ಸಿದ್ಧಾಂತದ ದ್ಯೋತಕ ಕೃಷ್ಣಭಕ್ತಿಯೇ ವಿಶಿಷ್ಟ ಸಾಧನೆಗೆ ಪೂರಕ ಸುಗಮವಲ್ಲ ನಡೆದು ಬಂದ ಹಾದಿ ಧರ್ಮಜಾಗೃತಿಯಲಿ  ಕಾಯಕ ಯೋಗಿ ಸಂಕಷ್ಟದಲೂ ಸದಾ ಮಂದಹಾಸ ಸಾಮರಸ್ಯ ಸೌಹಾರ್ದ ನಡೆಯ ಸಂತ ಸಾರ್ಥಕತೆಯ ಸನ್ಯಾಸ ಜೀವನ 80 ವರ್ಷಗಳ ಕೃಷ್ಣನ ಆರಾಧನಾ ವಿಶ್ವ ಬಾಂಧವ್ಯಕ್ಕೆ ಶ್ರಮಿಸಿದ ಮನ ನಮಿಪೆವು ನಿಮಗೆ ಅಗಲಿದ ಮಹಾನ್ಚೇತನ                  ಶೈಲೂ....