298ಕಾವನವನು

ದೃಶ್ಯ ಕವನ##

ಶೀರ್ಷಿಕೆ :--  ಕಾವನವನು
********************

ಯಾರಿಲ್ಲ ನನ್ನ ಮುಂದೆ
ಎಲ್ಲವೂ ತೃಣವೆಂದೇ
ಹೆಚ್ಚಿ ಮೆರೆದೆ ಓ ಮನುಜ
ಈಗ ಇದೆ ನೋಡು ನಿನಗೆ ಸಜಾ

ಜಗವೇ ಹಿಡಿಮುಷ್ಟಿಯಲಿ
ಬಿಟ್ಟರಿಲ್ಲವೆಂದೇ ಸಮಷ್ಟಿಯಲಿ
ಎಲ್ಲೆಡೆ ಸೋರಿ ವೈರಸ್ ಬಿತ್ತರ
ನೋಡಿ0ದು ಜಗವೇ ತತ್ತರ.!!

ಮುಖಕ್ಕಿಂದು ಮುಸುಕು
ಜಗಜೀವನವೇ ಮಸುಕು
ಎಲ್ಲರೊಡನೆ ಕಾಯ್ದು ಅಂತರ
ಜೀವ ಭಯವೇ ನಿರಂತರ

ಬಂದಳಿಲ್ಲಿ ಮಹಾಮಾರಿ
ಮಾನವನ ಬೆನ್ನಮೇಲೇರಿ
ಆದ್ಯಂತವವಳೇ ಕೊರೊನಾ
ಮಾಡುತಿಹಳು ಪ್ರಾಣಹರಣ

ಏರುಪೇರಾದಾಗ ಪ್ರಕೃತಿ
ಜನ ಜೀವನವೇ ವಿಕೃತಿ
ಅವಸಾನದಂಚಿಗೆ ದೂಡಿದೆ
ಆಧುನಿಕತೆಯ ಪರಮಾವಧಿ

ಉಸಿರಾಡಲೂ ಭಯವೀಗ
ಆವರಿಸಿಬಿಟ್ಟಿದೆ ಮಹಾರೋಗ
ಕಾವನವನೇ ಹರ ಶಿವಶಂಕರ
ಶ್ರದ್ಧಾಭಕ್ತಿ ಇರಲಿ ನಿರಂತರ

ಶರಣಾಗು ನಂಬಿ ದೈವದೆಡೆಗೆ
ಕಾಯುವನವನು ಅಡಿಗಡಿಗೆ
ನಡೆನುಡಿ ಭಕ್ತಿಯಿರಲಿ ಸ್ವಚ್ಛ
ತಾನೆಂದು ಮೆರೆವವರ ಮೆಚ್ಚ

ಜಗವನುಳಿಸಲಂದು ಶಿವ
ಹಾಲಾಹಲವ ಕುಡಿದನವ
ಹಾಲಾಹಲಕಿಂತ ಘೋರ
ಕೊರೊನಾದಿಂದ ರಕ್ಷಿಸುವ

             ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ