Posts

Showing posts with the label 428 ಭಾವ ಜೀವಿಯ ಮೌನ

248ಭಾವ ಜೀವಿಯ ಮೌನ

Image
ಭಾವ ಜೀವಿಯ ಮೌನ ******************* ತವಕಿಸುತ್ತಿವೆ ಹೊರಹೊಮ್ಮಲು ತುಟಿಯಂಚಲಿ  ಭಾವನೆಗಳು ಮನದಾಳದಲ್ಲಿ ಅವಿತಿದ್ದ ಕವಿಮನದ ಮಾತುಗಳು ತವಕಿಸುತ್ತಿವೆ ಹೊರಹೊಮ್ಮಲು ಕಣ್ಣಂಚಿನಲ್ಲಿ ಮಿಂಚುಗಳು ಎದೆಯಾಳದಿ ಮುಳುಗಿದ್ದ ಒಳಮನದ ನೋವುಗಳು ತವಕಿಸುತ್ತಿವೆ ಹೊರಹೊಮ್ಮಲು ಅಂತರಾಳದ  ಭಾವಗಳು ಆಸ್ಥೆಯಲಿ ಬರೆದಿದ್ದ ಹೃದಯಂಗಮ ಸಾಲುಗಳು ತಡೆಯುತ್ತಿದೆ  ಬಲವಾಗಿ ಕಾಣದ ಕೈಯ ಗೋಡೆಗಳು ಶರಣಾಗಿದೆ  ಮೌನಕೆ ಭಾವಜೀವಿಯ  ಅನಿಸಿಕೆಗಳು      ಶೈಲೂ......