296 ದ್ವಿರುಕ್ತಿ_ಕವನ
#ದ್ವಿರುಕ್ತಿ_ಕವನ ಕದ್ದು-ಕದ್ದು ನೋಡಬೇಡ ಗೆಳತಿ ಯಾಕ್ಹೀಗೆ ಮುಸಿ-ಮುಸಿ ನಗುತಿ? ಏನಿದೆ ನನ್ನ ಮೊಗದಲ್ಲಿ ಅಂಥದ್ದು? ಕಣ್ -ಕಣ್ ಬಿಟ್ಟು ನೋಡುವಂಥದ್ದು? ಹೇ..ಬೇಡ -ಬೇಡವೋ ದೊರೆಯೇ ನೀ ಮಾತು - ಮಾತಲ್ಲೇ ಚುಚ್ಚುವೆ ಪ್ರೀತಿ ಮಾಡಿದರೂ ತಪ್ಪೇನು? ಹೋಗು - ಹೋಗು ನಾನಿನ್ನ ಒಪ್ಪೆನು ಹೇ ಕಿಲ - ಕಿಲ ನಗುವ ಜಾಣೆ ಬಾ ಗಲ- ಗಲ ಮಾತಾಡು ಚೆನ್ನೆ ಯಾಕೇ ಕೋಪಗೊಳ್ಳುವೆ ನೀನು? ಗಪ್ -ಚುಪ್ ಎಂದ್ಹೇಳಿದ್ದಕ್ಕೇ ನಾನು? ಮೆಲ್ಲ - ಮೆಲ್ಲನೆ ಹೆಜ್ಜೆಯಿಡುವ ನೀರೆ ಮುದ್ದು - ಮುದ್ದು ಮಾತಾಡು ಬಾರೇ ಕೋಪ ಮಾಡಬೇಡವೇ ಚಿನ್ನಾ ನೀ ನಗು - ನಗುತ್ತಿದ್ದರೇ ಚೆನ್ನ ಫಳ - ಫಳನೆ ಹೊಳೆವ ಮೊಗದಲ್ಲಿ ನಗುವು ಬಿರಿ - ಬಿರಿದು ನಲಿಯಲಿ ಆ ನಗುಮೊಗದ ಅಂದ ಕಾಣುತ ನಾ ನಲಿ - ನಲಿದು ಬಾಳುವೆ ಅನವರತ ಶೈಲಜಾ ರಮೇಶ್