Posts

Showing posts with the label 264...ನನ್ನ ಬರಹಗಳು..(ನನ್ನ ಜೀವನ ನನ್ನ ಕಥೆ)

264...ನನ್ನ ಬರಹಗಳು..(ನನ್ನ ಜೀವನ ನನ್ನ ಕಥೆ)

Image
ನನ್ನ ಜೀವನ ನನ್ನ ಕಥೆ## ಜೀವನ ಸಂಗಾತಿಯ ಆಯ್ಕೆ ಸಂದರ್ಭ *****************************           ಎಲ್ಲಾ ಹೆಣ್ಣು ಮಕ್ಕಳಿಗೂ ಮದುವೆ ಅಂದರೆ  ನವಿರುಭಾವ, ಕನಸು, ನಾಚಿಕೆ, ನಿರೀಕ್ಷೆ, ಆತಂಕ, ಇರುತ್ತೆ.    ನನ್ನ ಕಥೆಯೋ ವಿಚಿತ್ರ.... ಅಸಲಿ ನನಗೆ ಮದುವೆ ಆಗೋ ಆಸಕ್ತಿ,  ಆಸೆಯೇ ಇರಲಿಲ್ಲ,  ಮದುವೆ ಅಂದ್ರೆ ಮಾರು ದೂರ ಹಾರ್ತಾಇದ್ದೆ.  ನಾನು ಮನೆಯ ಕೊನೆಯ ಮಗಳಾದ್ದರಿಂದ, ಅಲ್ಲದೇ  ನನ್ನ ಅಣ್ಣಂದಿರು, ಅಕ್ಕನೊಂದಿಗೆ ವಯಸ್ಸಿನಲ್ಲಿ ತುಂಬಾ ಅಂತರವಿದ್ದದ್ದರಿಂದ  ಅವರುಗಳ ಮದುವೆ ನಾನು ತುಂಬಾ ಚಿಕ್ಕವಳಿದ್ದಾಗಲೇ ಆಗಿತ್ತು . ಅವರುಗಳ ನೋವು ನಲಿವು , ಜಂಜಾಟ,  ಎಲ್ಲಾ ನೋಡಿ ನನಗೆ ಮದುವೆ ಅಂದ್ರೆ ಹೇಸಿಗೆ ಬರೋಷ್ಟು ಬೇಸರ ತರಿಸಿತ್ತು.  ಜೊತೆಗೆ ನನ್ನ ಸೋದರತ್ತೆಯoದಿರ ಮಕ್ಕಳುಗಳು ನನ್ನನ್ನು ಮದುವೆಯಾಗಲು ನಡೆಸುತ್ತಿದ್ದ ಸರ್ಕಸ್..  ಅಸಹ್ಯ ಮೂಡಿಸುತ್ತಿತ್ತು.   ಅಲ್ಲದೇ ಬಾಲ್ಯದಿಂದಲೂ ಶ್ರೀ ರಾಮಕೃಷ್ಣಾಶ್ರಮದ ಒಡನಾಟ,  ಸಾಧುಸಂತರ ಸಂಗ ನನಗೆ ವೈರಾಗ್ಯ ಮೂಡಿಸುತ್ತಿತ್ತು. ಅಲ್ಲದೆ ಚಿಕ್ಕಂದಿನಿಂದಲೂ ಅಮ್ಮ ಅಪ್ಪ ಹೇಳುತ್ತಿದ್ದ ಈಶ್ವರನ, ಕೃಷ್ಣನ ಕಥೆಗಳು, ನಾನೇ ಪಾರಾಯಣ ಮಾಡುತ್ತಿದ್ದ ರಾಮಾಯಣ, ಮಾಹಾಭಾರತ  ಕಥೆಗಳು ಅಧ್ಯಾತ್ಮದೆಡೆಗೆ ನನ್ನನ್ನ ಒಯ್ಯುತ್ಗಿದ್ದವು,  ರಾಮಕೃಷ್ಣಾಶ್ರಮದ ಒಡನ...