305 ಪಚ್ಚೆ ಪೈರಿನ ಸಿರಿಯು ಬಳುಕಲು

ಸಾಲಿಗೊಂದು ಕವನ

ಶೀರ್ಷಿಕೆ :--
ಪಚ್ಚೆ ಪೈರಿನ ಸಿರಿಯು ಬಳುಕಲು
**************************

ಪಚ್ಚೆ ಪೈರಿನ ಸಿರಿಯು ಬಳುಕಲು
ಭೂತಾಯಿಗಂದು ಸಂಭ್ರಮದ ಹೊನಲು
ಉತ್ತು ಬಿತ್ತಿದ್ದ ಕಾಳು ತೆನೆಯೊಡೆದು ತುಳುಕಲು
ಸ್ವರ್ಗವೇ ಧರೆಗಿಳಿದಂತೆ ನಲಿಯಲು
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ.!

ಕೃಷಿಕರಿಗೆ ದುಡಿಮೆಯ ಪ್ರತಿಫಲ
ತೊನೆಯುವ ತೆನೆಯ ಒಡಲಲ್ಲಿ
ರಸತುಂಬಿ ಕಟ್ಟಿದ ಕಾಳುಗಳ ಮಡಿಲಲ್ಲಿ
ರೈತ ಸಂಭ್ರಮದಿ ನಲಿವನಿಲ್ಲಿ.!
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ

ಬೆಳೆದ ಪೈರುಪಚ್ಚೆಯ ಒಕ್ಕಣೆ ಮಾಡಿ
ಹಸಿವೆ ನೀಗಿಸುವ ಸಿರಿಧಾನ್ಯವನು ನೋಡಿ
ವರ್ಷದ ದುಡಿಮೆಯ ಫಲ ಧಾನ್ಯ ರಾಶಿಯಲ್ಲಿ
ಸುಗ್ಗಿ ಸಂಭ್ರಮದ ಸಂಕ್ರಾಂತಿ ಎಲ್ಲೆಲ್ಲೂ
ಮನೆ ಮನೆಯಲ್ಲೂ ಸಿಹಿ ಹುಗ್ಗಿಯ ಘಮಲು

              ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು