182. ರೂಪಾಂತರ ಕವನ (ಅಮೃತ ವಾರ್ಷಿಣಿ)
ಚಲನಚಿತ್ರ ಗೀತೆಯ ರೂಪಾಂತರ## ಚಿತ್ರ : ಅಮೃತವರ್ಷಿಣಿ ಹಾಡು : ಈ ಸುಂದರ ಬೆಳದಿಂಗಳ ನನ್ನ ಕವಿತೆ.... ಈ ಸುಂದರ ಮನೆಯಂಗಳ ************************ ಈ ಸುಂದರ ಮನೆಯಂಗಳ ಈ ತಂಪಿನ ಸಂಜೆಯಲಿ ನನ್ನ ನಿನ್ನ ನಡುವಿನಲಿ... ಈ ಸುಂದರ ಮನೆಯಂಗಳ ಈ ತಂಪಿನ ಸಂಜೆಯಲಿ ಬೇಸರದ ಮಾತಿನಲೀ... ನಿನದೇ ಹೇಳಿಕೆ... ನನದೇ ತಾಳಿಕೆ.. ನಿನ್ನ ಈ ಮಾತಿನ ಚಕಮಕಿಯಲ್ಲಿ...ಓಹೋ... || ಈ ಸುಂದರ || ದಿನಾ ದಿನಾ ಪ್ರತೀ ದಿನಾ ಚಿನ್ನ ನಿನ್ನ ಮಾತಿಗೆ ಓಗೊಡುವೇ... ನನ್ನಾ ಮನ ರೋಸಿದ್ದರೂ ನಿನ್ನ ಮಾತಿಗೆ ಬೆಲೆ ಕೊಡುವೆ... ಒಲವೇ.... ಒಲವೇ ನಿನ್ನ ಮಾತೊಂದೇ ಆಜ್ಞೆಯೆನುತ ನಾ ತಿಳಿವೇ... || ಈ ಸುಂದರ || ಸಮಾ ..ಸಮ.. ಸರೀಸಮ ವಾಗ್ವಾದದೆ ಇಂಥ ಜಗಳ ಇದೆ ಮೊದಲೂ.. ಪ್ರೀತಿ ..ಪ್ರೇಮ ಎಲ್ಲೋಯ್ತೋ ಕಾಣೆ.. ಮಾತೆಲ್ಲಾ ಬರೀ ತೊದಲೂ... ಉಸಿರೇ..... ಉಸಿರೇ ನಿನ್ನ ಪ್ರೀತಿಗಾಗಿ ಈ ಉಸಿರಾ ಹಿಡಿದಿರುವೇ.... ನಮ್ಮ ಜಗಳವು ಕೊನೆಯಾಗಲಿ.. ಪ್ರೀತಿಯ ಕಲರವವೇ... ನಿನ ಮನಸಿನ ಸವಿ ನುಡಿಗೆ ನನ್ನ ಪ್ರೀತಿಯ ಹೊಳೆ ಹರಿಸಿ ನನ್ನ ಬಾಳಿಗೆ ಹೊಸಕನಸು ತರಿಸಿ ತರಿಸಿ ನನಸಾಗಿಸುವೇ.. || ಈ ಸುಂದರ || ಶೈಲಜಾ ರಮೇಶ್