128 ಫೇಸ್ಬುಕ್ ಪ್ರೀತಿ
Facebook ಪ್ರೀತಿ **************** ಹರಿದು ಹೋಗಿಬಿಟ್ಟಿತೇ ಪ್ರೀತಿ ಗೆಳೆಯ ಸುರಿಸುತಲಿದ್ದೇ ನೀ ಒಲವಿನ ಮಳೆಯ ಸರಿದು ಹೋಗಿಬಿಟ್ಟಿತೇ ಆ ಕಾಲ ಪ್ರೀತಿಧಾರೆ ಸುರಿಸುತ್ತಿದ್ದ ಆ ಮಳೆಗಾಲ ಬಂದು ಬಿಟ್ಟಿತೇ ಬಿರು ಬೇಸಿಗೆ ಬರಡಾಗಿ ಒಣಗಿಬಿಟ್ಟಿತೇಕೆ ಈ ಬೆಸುಗೆ ರಾಧೆ ನೀ ನಾನಿನ್ನ ಮಾಧವ ಎಂದ ಪಿಸುಮಾತು ಕಲಕಿ ಮನವ ಒಮ್ಮೆಗೇ ಪ್ರೀತಿ ಮೂಡಿಸಿತ್ತು ಹೃದಯದಿಂದ ಬಂದ ಮಾತಿದು ಎಂದದ್ದು ಸುಳ್ಳೇ ಗಟ್ಟಿತನವೇಕಿಲ್ಲ ಪ್ರೀತಿಗೆ ಅನಿಸುತಿದೆ ಇದು ಬರೀ ಜೊಳ್ಳೆ.. ಪ್ರೀತಿ ಮಾತನಾಡಿ ಸೆಳೆದೆಯೇಕೆನ್ನ ಮನವಾ ಇಂದೇಕಿಲ್ಲ ಆ ಪ್ರೀತಿ ಅದು ಬರೀ ಪೊಳ್ಳುತನವಾ..? Facebook ನಲ್ಲಿ ಶುರುವಾದ ಪ್ರೀತಿಗೆ ನಾ ಮರುಳಾಗಿಬಿಟ್ಟೆನೆ ನೀ ಬೀಸಿದ ಮಾಯಾಜಾಲದಿ ಬಂಧಿಯಾಗಿಬಿಟ್ಟೆನೆ ನಿಮಿಷಕ್ಕೊಂದು ಮೆಸೇಜು ಗಂಟೆಗೊಮ್ಮೆ ಫೋನು ಹರಿಸುತ್ತಿದ್ದ ಆ ಪ್ರೀತಿಮಾತುಗಳಿಗೆ ಬರ ಬಂದಿತೇನು..?? ನೀ ಹೇಗಿದ್ದರೂ ಸರಿ ನೀ ನನಗಿಷ್ಟ ಎಂದಂಥ ಮಾತು ಮರೆತುಬಿಟ್ಟೆಯಾ ಗೆಳೆಯ ಮೌನವಾಗಿಬಿಟ್ಟೆ ಏನಾಯ್ತು..? ಆನ್ಲೈನ್ನಲ್ಲಿ ಇಲ್ಲವೆಂದ್ರೆ ಚಡಪಡಿಸುತ್ತಿದ್ದೆ ನೀನು ಕಾಣದಿದ್ದರೆ ಅರೆಕ್ಷಣ ಓಡಿ ಬಂದುಬಿಡುವೆ ಎಂದಿದ್ದೆ ಗೊತ್ತೇನು.? ಸ್ವಲ್ಪ ನೋವಾದರೂ ನಿನಗೆ ಘಾಸಿ ಎನ್ನ ಮನಸಿಗೆ ಕರಗಿಹೋಗಿಬಿಟ್ಟಿದ್ದೆ ನಿನ್ನ ಈ ಮರುಳು ಮಾತಿಗೆ ಕಾಡಿಬೇಡಿಯಾದರೂ ಮಾತಾಡಲು ತೋರುತ್ತಿದ್ದ ಆತುರತೆ ಇಂದೇನಾಯ್ತೋ ಕಾಣೆ ಮುರುಟಿ ಹೊಯ್ತೆ...